ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ : ಸಾವಿನಲ್ಲೂ ದುಡ್ಡು ಮಾಡುವ ಅಮಾನವೀಯ ರೆಮಿಡಿಸಿವರ್ ಇಂಜೆಕ್ಷನ್ ಕಾಳ ಸ೦ತೆ೦ರಲ್ಲಿ ಮಾರಾಟ ದಂಧ ನಗರದಲ್ಲಿಯೂ ನಡೆದಿದ್ದು , ಕಳೆದ ರಾತ್ರಿ 6 ಮಂದಿಂರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ . ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ರೆ ಮಿಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಕಾಟ ಮಾಡುತ್ತಿದ್ದ ಜಾಲದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಸದ್ಯಕ್ಕೆ ಯಾವುದೇ ಮಾಹಿತಿ ನೀಡುತ್ತಿಲ್ಲ . ಕಳೆದ ಒಂದು ತಿಂಗಳಿಂದ ಕಾಳಸಂತೆ ಯಲ್ಲಿ ಇಂಜೆಕ್ಷನ್ ಮಾರಾಟವನ್ನು ಇವರು ನಡೆಸುತ್ತಿದ್ದರೆನ್ನಲಾಗಿದ್ದು , ಒಂದು ಇಂಜೆಕ್ಷನ್ ಸುಮಾರು 30 ಸಾವಿರ ರೂಪಾಯಿಗೆ ಮಾರಾಟ ಮಾಡುವ ಮೂಲಕ ಸಾವಿನಲ್ಲೂ ದುಡ್ಡು ಮಾಡುವ ಅಮಾನ ವೀಯ ದಂಧೆ ನಡೆಸುತ್ತಿದ್ದರೆನ್ನಲಾಗಿದೆ .ಜಾಲದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ವೈದ್ಯರು ಇರುವ ಶಂಕೆ ಇದ್ದು , ವಿಚಾರಣೆಗೆ ಕರೆತಂದವರನ್ನು ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ಪೊಲೀಸರು ಕೂಲಂಕುಷ ವಿಚಾರಣೆ ನಡೆಸುತಿ ದ್ದಾರೆ . ಆದರೆ , ರಾಜಕೀಯ ಪ್ರಭಾವ ಬಳಸಿಕ ಕೊಂಡು ಬಂಧಿತ ಆರೋಪಿಗಳನ್ನು ರಕ್ಷಿಸಿ ಪ್ರಕರಣ ವನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಯು ತ್ತಿದೆಯೆಂಬ ದೂರುಗಳು ಕೇಳಿ ಬರುತ್ತಿವೆ .