ಇಸ್ರೇಲ್ ಮತು ಪ್ಯಾಲೇಸ್ತೀನ್ ಸಂಘರ್ಷ- 32 ಕ್ಕೂ ಅಧಿಕ ಸಾವು – ಪ್ಯಾಲೇಸ್ತೀನ್ ರಾಕೆಟ್ ದಾಳಿಗೆ ಇಸ್ರೇಲ್ ನಲ್ಲಿ ಕೇರಳದ ಮಹಿಳೆ ಸಾವು

JANANUDI.COM NETWORK

ಜೆರುಸಲೆಮ್(12-05-2021): ಮದ್ಯ ಪ್ರಾಚ್ಯದಲ್ಲಿ ಮತ್ತೆ ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ದೇಶಗಳೊಡನೆ ಮತ್ತೆ ಸಂಘರ್ಷ ಏರ್ಪಟ್ಟಿದೆ. ಗಾಜಾ ಪಟ್ಟಿಯಲ್ಲಿ ನಡೆದ ಪ್ಯಾಲೇಸ್ತೀನ್ ಮೇಲೆ ಇಸ್ರೇಲ್  ದಾಳಿ ಮಾಡಿದಾಗ ಪ್ಯಾಲೇಸ್ತೀನ್ ನ 32 ಜನ ಹತರಾದರೆಂದು ಹಮಾಸ್ ಆರೋಪಿಸಿದೆ.

    ಅದಕ್ಕೆ ಪ್ರತಿಯಾಗಿ  ಪ್ಯಾಲೇಸ್ತೀನ್ ನಡೆಸಿದ ರಾಕೆಟ್ ದಾಳಿಯಲ್ಲಿ ಇಸ್ರೇಲ್‌ನಲ್ಲಿ 30 ವರ್ಷದ ಭಾರತೀಯ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಕೇರಳದ ಇಡುಕ್ಕಿ ಜಿಲ್ಲೆಯವರಾದ ಸೌಮ್ಯಾ ಸಂತೋಷ್ ಎಂದು ತಿಳಿದು ಬಂದಿದೆ. ಇಅವಳು ದಕ್ಷಿಣ ಇಸ್ರೇಲಿ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧೆಯೊಬ್ಬರಿಗೆ ಆರೈಕೆಯ ಮೇಡ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇವರು ತನ್ನ ಗಂಡನೊಂದಿಗೆ ಫೋನಿನಲ್ಲಿ ಮಾತನಾಡುತ್ತಿರುವಾಗ, ರಾಕೆಟ್ ಅವಳ ಮೇಲೆ ಎರಗಿತೆಂದು ತಿಳಿದು ಬಂದಿದೆ.

Thanks to Pius Mr. Ligory Rodrigues For giving these photos Thanks to