ರಾಜ್ಯದಲ್ಲಿ ನಿನ್ನೆ ಕೊರೋನಾಗೆ 596 ಸಾವು, ಬೆಂಗಳೂರು 16,747 ರಾಜ್ಯದಲ್ಲಿ 39,305 ಮಂದಿಗೆ ಪಾಸಿಟಿವ್

JANANUDI.COM NETWORK

ಬೆಂಗಳೂರು:ಮೇ,11 ರಾಜ್ಯದಲ್ಲಿ ಕೊರೋನಾ ಆರ್ಭಟ ಜೋರಾಗಿಯೇ ಮುಂದುವರೆದಿದ್ದು, ನಿನ್ನೆ 10-5-21 ರಂದು ರಾಜ್ಯದಲ್ಲಿ ಒಟ್ಟು 39,305 ಜನರಿಗೆ ಕೊರೋನಾ ಸೋಂಕು ತಟ್ಟಿರುವುದು ದೃಢಪಟ್ಟಿದ್ದು,  ರಾಜ್ಯದಲ್ಲಿ ನಿನ್ನೆ ಒಂದೇ ದಿನದಲ್ಲಿ 596 ಜನರನ್ನು ಬಲಿಯಾಗಿದ್ದಾರೆ

    ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 16,747 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕ ಮುಂದುವರೆದಿದೆ. ಹಾಗೆ ಬೆಂಗಳೂರು ಒಂದರಲ್ಲೇ 374 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ.

    ಹಾಗೆ ಜಿಲ್ಲಾವಾರು ಕೊರೋನಾ ಪ್ರಕರಣಗಳು ಇಂತಿವೆ. ಉಡುಪಿ 855, ದಕ್ಷಿಣ ಕನ್ನಡ 1175,  ಬೆಂಗಳೂರು ನಗರ 16747, ಬೆಂಗಳೂರು ಗ್ರಾಮೀಣ 704, ಬಾಗಲಕೋಟೆ 968, ಬಳ್ಳಾರಿ 973, ಬೆಳಗಾವಿ 736, , ಬೀದರ್ 305, ಚಾಮರಾಜನಗರ 623, ಚಿಕ್ಕಬಳ್ಳಾಪುರ 599, ಚಿಕ್ಕಮಂಗಳೂರು 362, ಚಿತ್ರದುರ್ಗ 172, ದಾವಣಗೆರೆ 197, ಧಾರವಾಡ 1006, ಗದಗ 332, ಹಾಸನ 1800, ಹಾವೇರಿ 214, ಕಲಬುರಗಿ 988, ಕೊಡಗು 534, ಕೋಲಾರ 755, ಕೊಪ್ಪಳ 412, ಮಂಡ್ಯ 1133, ಮೈಸೂರು 1537, ರಾಯಚೂರು 582, ರಾಮನಗರ 337, ಶಿವಮೊಗ್ಗ 820, ತುಮಕೂರು 2168, ಉತ್ತರ ಕನ್ನಡ 885, ವಿಜಯಪುರ 659, ಯಾದಗಿರಿ 727 ಪ್ರಕರಣಗಳು ದಾಖಲಾಗಿವೆ.