ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯ ತನಕ ವೀಕೆಂಡ್ ಕರ್ಫ್ಯೂ -ಉಳಿದ ದಿನ ನೈಟ್ ಕರ್ಫ್ಯೂ ಜಾರಿ

JANANUDI.COM NETWORK

ಬೆಂಗಳೂರು, ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯ ತನಕ ವೀಕೆಂಡ್ ಸಂಪೂರ್ಣ ಕರ್ಫ್ಯೂ ವಿಧಿಸಿ ಸರಕಾರ ಆದೇಶ ನೀಡಿದೆ. ಉಳಿದಂತೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಆದೇಶ ನೀಡಲಾಗಿದೆ.ಇದು ಏಪ್ರಿಲ್ 21ರಿಂದ ಹೊಸ ಮಾರ್ಗಸೂಚಿ ಜಾರಿಗೊಳಿಸಿ ಸರಕಾರದ ಮುಖ್ಯ ಕಾರ್ಯದರ್ಶಿಗಳಿ ಆದೇಶ ಹೊರಡಿಸಿದ್ದಾರೆ.ಇದು  ಮುಂದಿನ ಮೇ ತಿಂಗಳ 4ರ ತನಕ ಹೊಸ ಮಾರ್ಗಸೂಚಿ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ ಬೆಳಿಗ್ಗೆ 11 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

ಧಾರ್ಮಿಕ ಕೇಂದ್ರಗಳು ಸಂಪೂರ್ಣ ಬಂದ್  ಎಂದು ತಿಳಿಸಲಾಗಿದೆ. ಇನ್ನು ಧಾರ್ಮಿಕ ಕೇಂದ್ರಗಳನ್ನು ಸಂಪೂರ್ಣ ಬಂದ್. ಕೇವಲ ಪೂಜಾರಿಗಷ್ಟೇ  ದೇವಾಲಯಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮದೆವೆ ಸಮಾರಂಭಗಳಿಗೆ 50 ಜನರ ಮಾತ್ರ
ಮದುವೆ ಸಮಾರಂಭಗಳಿಗೆ 50 ಜನರ ಮಿತಿ ವಿಧಿಸಿದೆ. ಉಳಿದಂತೆ ಇತರ ಸಮಾರಂಭಗಳು ಹಾಗೂ ಅಂತ್ಯ ಸಂಸ್ಕಾರಗಳಿಗೆ 20 ಜನರ ಮಿತಿ ವಿಧಿಸಿದೆ.

ಶಾಲಾ ಕಾಲೇಜುಗಳಿಗೆ ರಜೆ
ಮುಂದಿನ ಏಳು ದಿನಗಳ ಕಾಲ ಶಾಲಾ ಕಾಲೇಜುಗಳನ್ನು ಸಂಪೂರ್ಣ ಬಂದ್ ಮಾಡಿ ಆದೇಶ ನೀಡಲಾಗಿದೆ.