ಕುಂದಾಪುರದ ಪ್ರತಿಷ್ಠಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯೋಗ ಮೇಳ 26 ರಂದು ಉದ್ಘಾಟನೆ

JANANUDI.COM NETWORK

ಈ ಉದ್ಯೋಗ ಮೇಳದಲ್ಲಿ 20ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು 750 ವಿದ್ಯಾರ್ಥಿಗಳಿಗಾಗಿ ಎರ್ಪಡಿಸುವ ಉದ್ಯೋಗ ಮೆಳವನ್ನು ಮಾರ್ಚ್ 26 ರಂದು ಉದ್ಘಾಟನೆ ಮಾಡಲಾಗುವುದು.
ಈ ಉದ್ಯೋಗ ಮೇಳಕ್ಕೆ ಬಿ.ಕಾಂ, ಬಿ.ಸಿ.ಎ, ಬಿ.ಎಸ್ಸಿ, ಬಿ.ಎ, ಎಮ್.ಸಿ.ಎ, ಬಿ.ಬಿ.ಎ, ಎಮ್.ಎಸ್ಸಿ, ಎಮ್.ಕಾಂ ಹಾಗೂ ಎಮ್.ಬಿ.ಎ, ವಿದ್ಯಾರ್ಥಿಗಳು ಅರ್ಹತೆಯನ್ನು ಹೊಂದಿರುತ್ತಾರೆ. ಈ ಉದ್ಯೋಗ ಮೇಳದಲ್ಲಿ 2020 ಮತ್ತು ಅದಕ್ಕಿಂತ ಮುಂಚೆ ಪದವಿ ಪಡೆದ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮಾತ್ರ ಕ್ಯಾಂಪಸ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಸಕ್ತರು www.mitkundapura.com/jobfair ವೆಬ್ ಪೇಜ್ ನಲ್ಲಿ ಲಭ್ಯವಿರುವ ಲಿಂಕ್ ನ ಉಪಯೋಗಿಸಿ ನೋಂದಣಿ ಮಾಡಿಕೊಳ್ಳಬಹುದು. ಈ ಉದ್ಯೋಗ ಮೇಳಕ್ಕೆ ಯಾವುದೇ ರೀತಿಯ ನೋಂದಣಿ ಶುಲ್ಕ ಇರುವುದಿಲ್ಲ.