ಮೂಡ್ಲಕಟ್ಟೆ ಎಂ ಐ ಟಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

JANANUDI.COM NETWORK

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಶಿಕ್ಷಕಿಯರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾಲೇಜಿನ ಎಮ್.ಬಿ.ಎ ವಿಧ್ಯಾರ್ಥಿಗಳು ಸಿಬ್ಬಂದಿಗಳನ್ನು ಸ್ವಾಗತಿಸಿ, ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಹೇಗೆ ಪ್ರಾಮುಖ್ಯತೆ ಪಡೆದಿದೆ ಎಂದು ವಿವರಿಸಿ, ಹಲವು ಮನೋರಂಜನ ಕಾರ್ಯಕ್ರಮಗಳನ್ನ ನಡೆಸುವ ಮೂಲಕ ಮಹಿಳಾ ದಿನಾಚರಣೆಯನ್ನು ಕ್ರಿಯಾಶೀಲವಾಗಿ ಆಚರಿಸಿದರು. ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಎಲ್ಲಾ ಮಹಿಳೆಯರಿಗೆ ಶುಭಾಶಯ ಕೋರಲಾಯಿತು