ದೊಡ್ಡ ಹಸಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಕೋಲಾರ: ತಾಲ್ಲೂಕಿನ ದೊಡ್ಡ ಹಸಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜುಳ ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ ಕೆ. ನಾರಾಯಣಸ್ವಾಮಿ ಇಂದು ಮಾಜಿ ಸಚಿವ ಆರ್. ವರ್ತೂರು ಪ್ರಕಾಶ್ ರವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್. ವರ್ತೂರು ಪ್ರಕಾಶ್, ಮುಖಂಡ ಬೆಗ್ಲಿ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್,ಅರುಣ್ ಪ್ರಸಾದ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಆಂಜಿನಪ್ಪ, ಬಂಕ್ ಮಂಜು, ಎಪಿಎಂಸಿ ನಿದೇರ್ಶಕ ಅಪ್ಪಯ್ಯಪ್ಪ, ಛತ್ರ ಕೋಡಿಹಳ್ಳಿ ಮಂಜುನಾಥ್, ಲಕ್ಷ್ಮೀ ಸಾಗರ ಮುನಿರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಆರ್.ಗೌಡ, ಕಾರ್ಯದರ್ಶಿ ನಾರಾಯಣಸ್ವಾಮಿ, ದೊಡ್ಡ ಹಸಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಮುನಿರಾಜು, ಮುನಿಸ್ವಾಮಿ, ರಾಜಣ್ಣ, ಚಲಪತಿ, ನಾರಾಯಣಸ್ವಾಮಿ, ವೆಂಕಟರಾಜು, ರಾಜೇಶ್ವರಿ, ಲೀಲಾವತಿ, ಜಗದೀಶ್, ಮಮತ, ಆಂಜಮ್ಮ. ಶೋಭ, ಮುನಿರತ್ನಮ್ಮ, ಕುಮಾರ್, ಸುನಂದಮ್ಮ, ಗೌರಮ್ಮ, ಸರೋಜಮ್ಮ, ಸಿಬ್ಬಂದಿಗಳಾದ ನಾಗೇಶ್, ಸತೀಶ್, ಆನಂದ್, ವಿಜಿ, ರಮೇಶ್, ಗ್ರಾಪಂ ಎಲ್ಲಾ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.