ನಿಧನ ಸುದ್ದಿ : ನಿವೃತ್ತ ಡಿಎಫ್‍ಒ ಕುಂಭಾಶಿ ಭಾಸ್ಕರ ಗಾಣಿಗ

JANANUDI.COM NETWORK

ಬೀಜಾಡಿ: ನಿವೃತ್ತ ಡಿಎಫ್‍ಒ ಕುಂಭಾಶಿ ಭಾಸ್ಕರ ಗಾಣಿಗ(60) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಮಂಗಳವಾರ ನಿಧನರಾದರು. ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಇವರು ಹೆಬ್ರಿ, ಮಡಿಕೇರಿ, ಕುಶಾಲನಗರ, ಕೊಪ್ಪ ಮೊದಲಾದ ಕಡೆ ಸೇವೆ ಸಲ್ಲಿಸಿದ ಇವರು ದಕ್ಷ ಅಧಿಕಾರಿಗಳಾಗಿ ಹೆಸರು ಗಳಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಸಹಿತ ಮೂವರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.