ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಕೋಲಾರ: ಜಿಲ್ಲೆಯಾದ್ಯಂತ ಕರೋನಾ ವೈರೆಸ್ ತಡೆಗೆ ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಆದೇಶ.
ಕೋಲಾರ: ಜಿಲ್ಲೆಯಾದ್ಯಂತ 15 ದಿನಗಳ ಕಾಲ ಅಂಗನವಾಡಿ, ಶಾಲಾ ಕಾಲೇಜು ಎಲ್ಲಾ ತರಹದ ಶಿಕ್ಷಣ ಸಂಸ್ಥೆಗಳಿಗೆ (ಪರೀಕ್ಷೆ ಹೊರತು ಪಡಿಸಿ) ದಿನಾಂಕ 14-03-2020 ರಿಂದ ಜಾರಿಗೆ ಬರುವಂತೆ ರಜೆಯನ್ನು ಘೋಷಿಸಿದ್ದು. ಜಿಲ್ಲೆಯಾದ್ಯಂತ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸೇರುವಂತಹ ಸ್ಥಳಗಳಾದ ಸಂತೆ, ಜಾತ್ರಾ ಸ್ಥಳ, ರಥೋತ್ಸವ. ಉರುಸ್. ಉತ್ಸವ ಇತ್ಯಾದಿ ಧಾರ್ಮಿಕ /ಖಾಸಗಿ ಸಮಾರಂಭಗಳನ್ನು ಸರ್ಕಾರಿ ಅಥವಾ ಖಾಸಗಿ ಸ್ಥಳಗಳಲ್ಲಿ ಜನಸಂದಣಿಯಾಗುವಂತಹ ಸ್ಥಳಗಳಲ್ಲಿ ಆಚರಣೆಗಳನ್ನು ಒಂದು ವಾರದವರಗೆ ನಿಷೇಧಿಸಲಾಗಿದೆ. ಜಿಲ್ಲೆಯಾದ್ಯಾಂತ ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ಉದ್ಯಾನವನಗಳನ್ನು ನಾಟಕ ಪ್ರದರ್ಶನ, ಶಾಪಿಂಗ್ ಮಾಲ್ ಗಳನ್ನು ಮುಚ್ಚುವಂತೆ ಹಾಗೂ ಸರ್ಕಾರಿ ಸಮಾರಂಭಗಳಲ್ಲಿ ಜನದಟ್ಟಣೆ ಸೇರುವಂತಹ ಕಾರ್ಯಕ್ರಮಗಳನ್ನು ಒಂದು ವಾರದವರೆಗೆ ರದ್ದುಗೊಳಿಸಿ ಕೋಲಾರ ಜಿಲ್ಲಾಧಿಕಾರಿ ಗಳಾದ ಸಿ ಸತ್ಯ ಭಾಮ ಅವರು ಆದೇಶಿಸಿದ್ದಾರೆ.