ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲಾ ಕ್ರಿಡೋತ್ಸವ

JANANUDI.COM NETWORK 

ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲಾ ಕ್ರಿಡೋತ್ಸವ

 

ಕುಂದಾಪುರ, ನ.8: ಇಲ್ಲಿನ ಸಂತ ಜೋಸೆಫ್ ಪ್ರೌಢ ಶಾಲಾಯ ಕ್ರಿಡೋತ್ಸವವು ನ. 8 ರಂದು ರೋಟರಿ ಕ್ಲಬ್ ರೀವರ್ ಸೈಡ್ ಇವರ ಸಹಯೋಗದಲ್ಲ್ಲಿ ಶಾಲಾ ಮೈದಾನದಲ್ಲಿ ನಡೆಯಿತು. ಶಾಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕೀರ್ತನಾ ದ್ವಜಾರೋಹಣ ಮಾಡುವ ಮೂಲಕ ಕ್ರಿಡೋತ್ಸವನ್ನು ಉದ್ಘಾಟಿಸಿ ಶುಭ ಕೋರಿದರು.
ಮುಖ್ಯ ಅತಿಥಿಗಳಾದ ರೋಟರಿ ಕ್ಲಬ್ ರೀವರ್ ಸೈಡ್ ಇದರ ಅಧ್ಯಕ್ಷ ರೊ| ರಾಜು ಪೂಜಾರಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ‘ಈ ಶಾಲೆಯು ಶಿಸ್ತಿಗೆ ಹೆಸರಾಗಿದ್ದು ಇಲ್ಲಿನ ಚಟುವಟಿಟಿಕೆಗಳು ಈ ಶಾಲೆಗೆ ನೆರವನ್ನು ನೀಡಲು ನಮಗೆ ಸ್ಪೂರ್ತಿರಾಯಕವಾಗಿವೆ. ಕ್ರೀಡೆಯಲ್ಲಿ ಎಲ್ಲರಿಗೂ ಪ್ರಥಮ ಸ್ಥಾನ ಪಡೆಯಲು ಸಾಧ್ಯವಿಲ್ಲಾ, ಆದರೆ ಕ್ರೀಡೆ ನಮ್ಮನ್ನು ಆರೋಗ್ಯವಂತರಂತೆ ಇರಲು ಸಹಕರಿಸುತ್ತೆ, ಅದಕ್ಕಾಗಿ ನಾವು ನಮ್ಮಲ್ಲಿ ಕ್ರೀಡಾ ಪ್ರವ್ರತ್ತಿಯನ್ನು ಬೆಳೆಸಿಕೊಳ್ಳ ಬೇಕು’ ಎಂದು ನುಡಿದರು. ಇನ್ನೊರ್ವ ಅತಿಥಿ ಕುಂದಾಪುರ ಚರ್ಚ್ ರಸ್ತೆಯ ಪುರಸಭೆಯ ಸದಸ್ಯೆ ಸ್ವೇತಾ ಸಂತೋಷ್ ಪಥ ಸಂಚಲನೇಯ ಗೌರವವನ್ನು ಪಡೆದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ ಸ್ವಾಗತಿಸಿದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ ಮತ್ತು ರೋಟರಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಕ ಮೈಕಲ್ ಪುರ್ಟಾರ್ಡೊ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ಶಿಕ್ಷಕೇತರರು ಕ್ರೀಡಾ ಕೂಟಕ್ಕೆ ಸಹಕರಿಸಿದರು. ಶಿಕ್ಷಕಿ ಶ್ರೀಲತಾ ವಂದಿಸಿದರು.

 

ವಂದಿಸಿದರು.