ಶಿಕ್ಷಕಿ ಸೆಲಿನ್ ಡಿಸೋಜಾ ಇವರಿಗೆ ರಾಜ್ಯ ಸ್ಕೌಟ್ ಗೈಡ್ ಸಂಸ್ಥೆಯಿಂದ ಸೇವಾ ಪ್ರಶಸ್ತಿ

JANANUDI.COM NETWORK 

ಶಿಕ್ಷಕಿ ಸೆಲಿನ್ ಡಿಸೋಜಾ ಇವರಿಗೆ ರಾಜ್ಯ ಸ್ಕೌಟ್ ಗೈಡ್ ಸಂಸ್ಥೆಯಿಂದ ಸೇವಾ ಪ್ರಶಸ್ತಿ

ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ನಿರಂತರವಾಗಿ ಸ್ಕೌಟ್ ಗೈಡ್ ತರಬೇತಿದಾರಳಾಗಿ ನಿರಂತರವಾಗಿ 20 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿ ಸೆಲಿನ್ ಡಿಸೋಜಾ ಇವರಿಗೆ ರಾಜ್ಯ ಸ್ಕೌಟ್ ಗೈಡ್ ಸಂಸ್ಥೆಯಿಂದ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆ ಪ್ರಯುಕ್ತ ಶಾಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್‍ನ ಅಧ್ಯಕ್ಷರಾದ ರೋ.ರಾಜು ಪೂಜಾರಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ. ಶಿಕ್ಷಕ ಪ್ರಭಾರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ ಮತ್ತಿತರರು ಉಪಸ್ಥಿತರಿದ್ದರು.