ಕಥೊಲಿಕ್ ಸಭಾ ಕುಂದಾಪುರ ಘಟಕಕ್ಕೆ ನೂತನ ಪದಾಧಿಕಾರಿಗಳು – ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ

ಕಥೊಲಿಕ್ ಸಭಾ ಕುಂದಾಪುರ ಘಟಕಕ್ಕೆ ನೂತನ ಪದಾಧಿಕಾರಿಗಳು – ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ


ಕುಂದಾಪುರ,ಫೆ.24: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ, ಪದಾಧಿಕಾರಿಗಳ ಚುನಾವಣೆ ಇಗರ್ಜಿಯ ಸಭಾ ಭವನದಲ್ಲಿ ನೆಡೆದ ಚುನಾವಣೆಯಲ್ಲಿ ವಾಲ್ಟರ್ ಜೆ.ಡಿಸೋಜಾ ಈ ಸಾಲಿನ ಅಧ್ಯಕ್ಷರಾಗಿ ಆಯ್ಕೆಗೊಂಡರು,
ನಿಕಟ ಪೂರ್ವ ಅಧ್ಯಕ್ಷರು ಶೈಲಾ ಡಿಆಲ್ಮೇಡಾ, ನಿಯೋಜಿತ ಅಧ್ಯಕ್ಷರಾಗಿ ಬರ್ನಾಡ್ ಜೆ.ಡಿಕೋಸ್ತಾ , ಉಪಾಧ್ಯಕ್ಷೆಯಾಗಿ ಜೂಲಿಯೆಟ್ ಪಾಯ್ಸ್, ಕಾರ್ಯದರ್ಶಿಯಾಗಿ ವಿಲ್ಸನ್ ಡಿಆಲ್ಮೇಡಾ, ಸಹ ಕಾರ್ಯದರ್ಶಿಯಾಗಿ ಲೋನಾ ಲುವಿಸ್, ಖಚಾಂಚಿಯಾಗಿ ಪ್ರೇಮಾ ಡಿಕುನ್ಹಾ, ಸಹ ಖಚಾಂಚಿಯಾಗಿ ಲೋಯ್ ಕರ್ವಾಲ್ಲೊ, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ವಿನ್ಸೆಂಟ್ ಡಿಸೋಜಾ, ರಾಜಕೀಯ ಸಂಚಾಲಕಾರಾಗಿ ಜೋನ್ಸನ್ ಡಿಆಲ್ಮೇಡಾ, ಸರ್ಕಾರಿ ಸವಲತ್ತು ಸಂಚಾಲಕರಾಗಿ ವಿನೋದ್ ಕ್ರಾಸ್ಟೊ, ಲೆಕ್ಕ ಪರಿಶೋಧಕರಾಗಿ ಜೇಕಬ್ ಡಿಸೋಜಾ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುನೀಲ್ ಡಿಸೋಜಾ, ವಿಲ್ಸನ್ ಒಲಿವೇರಾ, ಮಾರ್ಕ್ ಡಿಸೋಜಾ, ಫ್ರಾನ್ಸಿಸ್ ಬ್ರಗಾಂಜಾ ಇವರುಗಳು ಆಯ್ಕೆಗೊಂಡರು. ಚುನಾವಣ ಪ್ರಕ್ರಿಯೆಯನ್ನು ಕುಂದಾಪುರ ವಲಯ ಸಮಿತಿಯ ಮಾಜಿ ಅಧ್ಯಕ್ಷ ಫ್ಲಾಯ್ವನ್ ಡಿಸೋಜಾ ಮತ್ತು ನಿಯೋಜಿತೆ ಅಧ್ಯಕ್ಷೆ ಮೇಬಲ್ ಡಿಸೋನೆಡೆಸಿಕೊಟ್ಟರು. ಅಧ್ಯಾತ್ಮಿಕ ನಿರ್ದೇಶಕರಾದ ಅ|ವ|ಸ್ಟ್ಯಾನಿ ತಾವ್ರೊ ಆರಿಸಿ ಬಂದವರನ್ನು ಶುಭ ಹಾರೈಸಿ ‘ಸಮಾಜಕ್ಕೆ ಒಳಿತಾಗುವ ಒಳ್ಳೆಯ ಕೆಲಸಗಳನ್ನು ಇನ್ನೂ ಹೆಚ್ಚು ಮಾಡಿರಿ’ ಎಂದು ಶುಭ ಕೋರಿದರು.