

ಮಂಗಳೂರು:ಸಂತ ಅಲೋಶಿಯಸ್ ಗೊನ್ಝಾಗ ಶಾಲೆ, ಮಂಗಳೂರು ಇದರ ವಿದ್ಯಾರ್ಥಿಯಾದ ಸಾರ್ಜೆಂಟ್ ಅದ್ವಿಕ್ ಭಂಡಾರಿ ಅವರು ಬೆಂಗಳೂರಿನಲ್ಲಿ ನಡೆದ ಎನ್.ಸಿ.ಸಿ ಅಂತರ ಗುಂಪು ಸ್ಪರ್ಧೆಯಲ್ಲಿ (NCC Inter Group Competition – IGC) ಆರ್ಮಿ ಜೆಡಿ/ಜೆಡಬ್ಲ್ಯೂ (Army JD/JW) ವಿಭಾಗದಲ್ಲಿ ಪ್ರತಿಷ್ಠಿತ ಅತ್ಯುತ್ತಮ ಕೆಡೆಟ್ ಟ್ರೋಫಿ (Best Cadet Trophy) ಗೆಲ್ಲುವ ಮೂಲಕ ಶಾಲೆಗೆ ಅಪಾರ ಕೀರ್ತಿ ತಂದಿದ್ದಾರೆ.
ಅಂತರ ಗುಂಪು ಮಟ್ಟದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸಿದ ಅದ್ವಿಕ್ ಭಂಡಾರಿ ಅವರು ತಮ್ಮ ಅಸಾಧಾರಣ ಶಿಸ್ತು, ನಾಯಕತ್ವ ಗುಣ, ದೃಢಸಂಕಲ್ಪ ಹಾಗೂ ಪರಿಶ್ರಮದಿಂದ ಅತ್ಯುತ್ತಮ ಸಾಧನೆ ಮೆರೆದು ವಿಜೇತರಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕರಾದ (DDG) ಅವರಿಂದ ಪ್ರಶಸ್ತಿ ಟ್ರೋಫಿಯನ್ನು ಸ್ವೀಕರಿಸಿರುವುದು ಅವರ ಸಾಧನೆಗೆ ಮತ್ತಷ್ಟು ಗೌರವ ತಂದಿದೆ.
ಈ ಗಮನಾರ್ಹ ಸಾಧನೆಯ ಫಲವಾಗಿ ಅದ್ವಿಕ್ ಭಂಡಾರಿ ಅವರು ಪೂರ್ವ ಗಣರಾಜ್ಯೋತ್ಸವ ಶಿಬಿರ – ಪ್ರೀ-ಆರ್ಡಿಸಿ ಹಂತ 1 (Pre-RDC I) ಗೆ ಆಯ್ಕೆಯಾಗಿದ್ದಾರೆ. ಇದು ನವದೆಹಲಿಯಲ್ಲಿ ನಡೆಯುವ ಪ್ರತಿಷ್ಠಿತ ಗಣರಾಜ್ಯೋತ್ಸವ ಶಿಬಿರದಲ್ಲಿ (Republic Day Camp) ಭಾಗವಹಿಸುವತ್ತ ಅವರು ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ.
ಅದ್ವಿಕ್ ಭಂಡಾರಿ ಅವರ ಈ ಸಾಧನೆಯು ಅವರ ನಿರಂತರ ಪರಿಶ್ರಮ, ಆತ್ಮವಿಶ್ವಾಸ, ಶಿಸ್ತು ಮತ್ತು ಎನ್.ಸಿ.ಸಿಯ ಆದರ್ಶ ಮೌಲ್ಯಗಳ ಬಗೆಗಿನ ಬದ್ಧತೆಗೆ ಸಾಕ್ಷಿಯಾಗಿದೆ. ಅವರ ಯಶಸ್ಸು ಇತರ ವಿದ್ಯಾರ್ಥಿಗಳಿಗೂ ದೇಶಸೇವೆ, ನಾಯಕತ್ವ ಮತ್ತು ಶಿಸ್ತಿನ ಜೀವನವನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಗಿದೆ.
ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ. ಉಪ ಪ್ರಾಂಶುಪಾಲರಾದ ಲಾರೆಲ್. ಡಿ. ಸೋಜಾ ಮತ್ತು ಅಪರ್ಣ ಸುರೇಶ್ ,ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅದ್ವಿಕ್ ಭಂಡಾರಿ ಅವರನ್ನು ಈ ಅಭೂತಪೂರ್ವ ಸಾಧನೆಗಾಗಿ ಶ್ಲಾಘಿಸಿ, ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಮುಂದಿನ ಹಂತದಲ್ಲಿಯೂ ಅವರು ಯಶಸ್ಸು ಸಾಧಿಸಿ, ಶಾಲೆ ಹಾಗೂ ಮಂಗಳೂರು ಎನ್.ಸಿ.ಸಿ ಗುಂಪಿಗೆ ಇನ್ನಷ್ಟು ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.
Cadet Advik Bhandary of St Aloysius Gonzaga School Wins Best Cadet Trophy at NCC Inter Group Competition

Sergeant Advik Bhandary of St Aloysius Gonzaga School, Mangaluru, has won the prestigious Best Cadet Trophy in the Army JD/JW category at the NCC Inter Group Competition (IGC) held in Bengaluru.
Demonstrating commendable discipline, leadership and determination, Advik emerged as the Best Cadet in his category. The trophy was presented by the Deputy Director General (DDG) of the Karnataka and Goa Directorate.
Following his performance at the competition, Advik has been selected for Pre-Republic Day Camp (Pre-RDC) I, bringing him a step closer to the prestigious Republic Day Camp in New Delhi.
His success reflects his dedication to the National Cadet Corps and its values of discipline, service and leadership.
The management, Principal, staff and students of St Aloysius Gonzaga School congratulated Advik and wished him the very best in the forthcoming stages of his NCC journey.

