

ಕುಂದಾಪುರ, ಅಕ್ಟೋಬರ್, 30 ; ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಸಂಘಟನೆ, ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ ನಡೆಸಲು ಮತ್ತು ನಿರಂತರ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ, ಅತೀ ದೀರ್ಘ ಅವಧಿಯ, ಸಮೂಹ ಗಾಯನದ ಗಿನ್ನೆಸ್ ದಾಖಲೆಯನ್ನು ರಚಿಸಲು ಯೋಜಿಸಿದೆ.
ಈ ಪ್ರಯತ್ನದಲ್ಲಿ ಭಾರತ, ಆಸ್ಟ್ರೇಲಿಯಾ, ಕುವೇಯ್ಟ್, ಓಮನ್, ಖತಾರ್ ದೇಶಗಳಿಂದ ಕ್ರೈಸ್ತ–ಹಿಂದೂ–ಮುಸ್ಲಿಮ್–ಧರ್ಮಗಳಿಗೆ ಸೇರಿದ ರೋಮನ್ ಕ್ರೈಸ್ತ, ಜಿ. ಎಸ್. ಬಿ., ಕುಡಾಲ್ ದೇಶಸ್ಥ, ಖಾರ್ವಿ, ಕುಡುಮಿ, ಸಿದ್ದಿ, ನವಾಯತಿ, ಸಿರಿಯನ್ ಕ್ರೈಸ್ತ ಇತ್ಯಾದಿ ವಿವಿಧ ಕೊಂಕಣಿ ಜನಸಮುದಾಯಗಳು ಹಾಗೂ ಇತರೆ ಭಾಷಿಕ ಜನರು ಭಾಗವಹಿಸಲಿರುವರು. 6789+ ಗಾಯಕರು, 250+ ಸಂಗೀತ ಸಂಯೋಜಕರು ರಚಿಸಿದ, ವಿವಿಧ ಭಾಷಾ ಪ್ರಬೇಧಗಳ 4500+ ಕೊಂಕಣಿ ಹಾಡುಗಳನ್ನು ಹಾಡಲಿರುವರು. ಒಟ್ಟು 300 ತಂಡಗಳು ತಲಾ ಒಂದು ಗಂಟೆ ಹಾಡಿ ಈ ದಾಖಲೆಗೆ ಪ್ರಯತ್ನಿಸಲಿರುವರು.
ಈ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದಲ್ಲಿ ಮತ್ತು ಗಿನ್ನೆಸ್ ವಿಶ್ವ ರಚಿಸಲು ಪ್ರಯತ್ನಿಸುವ ತಂಡಗಳಲ್ಲಿ ಗಂಗೊಳ್ಳಿಯ “ರಿಥಂ ಸ್ಕ್ವಾಡ್”ಪಂಗಡವೂ ಭಾಗವಸಲಿದೆ.
ಈ ಸಮ್ಮೇಳನವು ಮತ್ತು ಗಿನ್ನೆಸ್ ದಾಖಲೆಯ ಪ್ರಯತ್ನ ಇದೇ 2026 ನವೆಂಬರ್ 03 ರಿಂದ 15 ರವರೆಗೆ, ಮಂಗಳೂರಿನ ಪುರಭವನದಲ್ಲಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ ನಡೆಯಲಿದೆ. ಈ ಪ್ರಯುಕ್ತ ಗಂಗೊಳ್ಳಿಯ “ರಿಥಂ ಸ್ಕ್ವಾಡ್”ಪಂಗಡ” ನವೆಂಬರ್ 6 ರಂದು ಮಧ್ಯಾಹ್ನ 3 ಗಂಟೆಗೆ ಗಾಯನ ಮಾಡಲಿದೆ.
ತಂಡದ ನಾಯಕತ್ವ ಲಾಯ್ಡ್ ರೆಬೇರೊ ವಹಿಸಲಿದ್ದು, ಶರೋಲ್ ಕ್ರಾಸ್ಟೊ, ಫಾ. ರೋಶನ್ ಡಿಸೋಜಾ, ಜಾನೆಟ್ ಡಯಾಸ್, ಸ್ಟೀಫನ್ ಲುವಿಸ್, ಆಶಾ ರೆಬೇರೊ, ರೋಶನ್ ಒಲಿವೆರಾ, ಫಿಲೋಮಿನಾ ಒಲಿವೆರಾ, ಕ್ರಿಶಾಲ್ ಪಿಂಟೊ, ಕ್ರಿಸ್ಟನ್ ಪಿಂಟೊ, ಶಾಂತಿ ಒಲಿವೆರಾ, ವಿಲ್ಸನ್ ರೆಬೇರೊ, ವಿಲ್ಸನ್ ಡಯಾಸ್, ರೀನಾ ಪಿಂಟೊ, ಭಗಿನಿ ಐಡಾ ಡಿಸೋಜಾ, ಭಗಿನಿ ವಿಜಯ ಕ್ರಾಸ್ತಾ, ಅಮಿಶಾ ಫೆರ್ನಾಂಡಿಸ್, ಆಶಾ ಡಿಕೋಸ್ತಾ, ಪ್ರಿಯಾಂಕಾ ಪಿಂಟೊ, ಪ್ರೀತಿ ಫೆರ್ನಾಂಡಿಸ್, ಸೆಲೀನ್ ಲೋಬೊ, ಮೇಬಲ್ ಬರೆಟ್ಟೊ, ಸರಿತಾ ಡಿಸೋಜಾ, ಜೂಲಿಯೆಟ್ ಡಯಾಸ್, ಮತ್ತು ಸಿರೋಫಿನ್ ರೆಬೇರೊ ತಂಡದ ಸದಸ್ಯರಾಗಿ ಗಾಯನ ಹಾಡಲಿದ್ದಾರೆ.
ಈ ಸಂದರ್ಭದಲ್ಲಿ ನಮ್ಮ ಜನನುಡಿ ವಾರ್ತೆ ಸಂಸ್ಥೆ ಗಂಗೊಳ್ಳಿಯ “ರಿಥಂ ಸ್ಕ್ವಾಡ್” ಪಂಗಡಕ್ಕೆ ಶುಭವನ್ನು ಕೋರುತ್ತದೆ. ಶುಭವಾಗಲಿ.

