

ಕು೦ದಾಪುರ ಪುರಸಭೆ ಸದಸ್ಯರಾಗಿ ಮೂರು ಅವಧಿಗೆ ಸೇವೆ ಸಲ್ಲಿಸಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಜಿ.ವಿತ್ಯಾನ೦ದ (62) ಅ.1 ರಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರುಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕಾಲೇಜು ದಿನಗಳಲ್ಲಿ ಎನ್ ಎಸ್ ಯುಐ ಮೂಲಕ
ಗುರುತಿಸಿಕೊ೦ಡಿದ್ದ ಅವರು, ಯುವ ಕಾ೦ಗ್ರೆಸ್ ಹಾಗೂ ಕಾ೦ಗ್ರೆಸ್ ಪಕ್ಷದ ಪದಾಧಿಕಾರಿಯಾಗಿದ್ದರು. ಹೊಟೀಲ್
ಹಾಗೂ ಬಸ್ ಉದ್ಯಮಿಯಾಗಿದ್ದ ಅವರು ಉತ್ತಮ ಕಬಡ್ಡಿ ಪಟುವಾಗಿದ್ದರು. ವಿವಿಧ ಸ೦ಘ ಸ೦ಸ್ಥೆಗಳಲ್ಲಿಯೂ
ಸೇವೆ ಸಲ್ಲಿಸಿದ್ದಾರೆ.

