

ಕುಂದಾಪುರ, ಸೆ. 12 ; ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ಉಡುಪಿ ಜಿಲ್ಲೆ ಮತ್ತುಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ 2026 ನೆಯ ಸಾಲಿನ ಕುಂದಾಪುರ ತಾಲೂಕು ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕಬ್ಬಡ್ಡಿ ಪಂದ್ಯಾಟವು ಕುಂದಾಪುರದ ಗಾಂಧಿ ಮೈದಾನದಲ್ಲಿ ದಿನಾಂಕ 12 .09 .2026 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸೇಂಟ್ ಮೇರಿಸ್ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ರೋಜರಿ ಚರ್ಚಿನ ಪ್ರಧಾನ ಧರ್ಮ ಗುರುಗಳಾಗಿರುವ ರೆ.ಫಾದರ್ ಪಾವ್ಲ್ ರೇಗೊರವರು ಅಧ್ಯಕ್ಷತೆಯನ್ನು ವಹಿಸಿ ಕ್ರೀಡೆ ಜೀವನದಲ್ಲಿ ಅತಿ ಮುಖ್ಯ. ಎಲ್ಲರೂ ಯಶಸ್ವಿ ಹಂತಕ್ಕೆ ತಲುಪಲು ಸಾಧ್ಯ. ಪಂದ್ಯಾಟದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಹಂಗಳೂರು ಇದರ ಅಧ್ಯಕ್ಷರು ಹಾಗೂ ಕುಂದಾಪುರದ ಆಶಾ ಕಾಂಪ್ಲೆಕ್ಸ್ ಕಟ್ಟಡದ ಮಾಲೀಕರು ಆಗಿರುವ ಶ್ರೀ ಹಂಸರಾಜ ಶೆಟ್ಟಿ ಅವರು ಉದ್ಘಾಟಕರಾಗಿ ಆಗಮಿಸಿ ದೀಪ ಬೆಳಗುವುದರೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಶುಭ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಕುಂದಾಪುರ ತಾಲೂಕು ಪದವಿ ಪೂರ್ವ ವಿಭಾಗದ ಕ್ರೀಡಾ ಸಂಯೋಜಕರಾಗಿರುವ ಶ್ರೀರಾಮ್ ಶೆಟ್ಟಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ, ಉಡುಪಿ ಜಿಲ್ಲಾ ಕಬ್ಬಡ್ಡಿ ರೆಫ್ರಿ ಬೋರ್ಡಿನ ಅರುಣ್ ಕುಮಾರ್ ಶೆಟ್ಟಿ, ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮ ವಿದ್ಯಾರ್ಥಿನಿಯರ ಶುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ಕಾಲೇಜಿನ ಪ್ರಾಂಶುಪಾಲ ಫಾದರ್ ರಾಲ್ವಿನ್ ಫರ್ನಾಂಡಿಸ್ ಸ್ವಾಗತಿಸಿದರು, ಉಪನ್ಯಾಸಕ ನಾಗರಾಜ್ ಶೆಟ್ಟಿ , ಕಾರ್ಯಕ್ರಮ ನಿರೂಪಿಸಿದರು ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕರಾದ ರೇಷ್ಮಾ ಫರ್ನಾಂಡಿಸ್ ವಂದಿಸಿದರು. ಸೈಂಟ್ ಮೇರಿಸ್ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಚಂದ್ರಶೇಖರ್ ಬಿಜಾಡಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಕರಾದ ಚಿದಾನಂದ, ಶಾಂತಿ ರಾಣಿ ಬರೆಟ್ಟೊ ಇನ್ನಿತರರು ಸಹಕರಿಸಿದರು.
ಫಲಿತಾಂಶ
ಬಾಲಕರ ವಿಭಾಗದಲ್ಲಿ
ಪ್ರಥಮ ಸ್ಥಾನ ; ಜನತಾ ಪಿಯು ಕಾಲೇಜು, ಹೆಮ್ಮಾಡಿ
ದ್ವಿತೀಯ ಸ್ಥಾನ ; ಎಸ್ ವಿ ಪಿಯು ಕಾಲೇಜು, ಗಂಗೊಳ್ಳಿ
ಬಾಲಕಿಯರ ವಿಭಾಗದಲ್ಲಿ
ಪ್ರಥಮ ಸ್ಥಾನ ; ಜನತಾ ಪಿಯು ಕಾಲೇಜು, ಹೆಮ್ಮಾಡಿ
ದ್ವಿತೀಯ ಸ್ಥಾನ ; ಸರಕಾರಿ ಪಿಯು ಕಾಲೇಜು ಕುಂದಾಪುರ








































