

ಶಿರೂರು: ಇಲ್ಲಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಎಲ್ ಕೆ.ಜಿ.ಯಿಂದ 2ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬಾಲರಾಧೆ ಮತ್ತು ಬಾಲಗೋಪಾಲ ಸ್ಪರ್ಧೆಯನ್ನು ಉತ್ಸಾಹದಿಂದ ಆಯೋಜಿಸಲಾಯಿತು.
ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶ್ರೀಕೃಷ್ಣ ಮತ್ತು ರಾಧೆಯ ವಿವಿಧ ವೇಷಭೂಷಣಗಳನ್ನು ಧರಿಸಿ ಸಂಭ್ರಮದಿಂದ ಪಾಲ್ಗೊಂಡರು. ಬೆಣ್ಣೆ ಮಡಕೆಯೊಂದಿಗೆ ಶ್ರೀಕೃಷ್ಣನ ಬಾಲ್ಯಲೀಲೆಗಳನ್ನು ಬಿಂಬಿಸುವ ಮನಮೋಹಕ ದೃಶ್ಯಾವಳಿಗಳು ನೋಡುಗರ ಮನಸೂರೆಗೊಂಡವು
ಸ್ಪರ್ಧೆಯ ನಿರ್ಣಾಯಕರಾಗಿ ಸಂಸ್ಥೆಯ ಶಿಕ್ಷಕಿಯರಾದ ಕುಮಾರಿ ವಿದ್ಯಾಶ್ರೀ, ಕುಮಾರಿ ಅನುಷಾ, ಶ್ರೀಮತಿ ನಾಗರತ್ನ ಹಾಗೂ ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಕಾರ್ಯನಿರ್ವಹಿಸಿದರು. ಕುಮಾರಿ ನವ್ಯಾ ಕಾರ್ಯಕ್ರಮಕ್ಕೆ ಸಹಕರಿಸಿದರು.
ವಿಜೇತರ ಪಟ್ಟಿ
ಎಲ್.ಕೆ.ಜಿ. ವಿಭಾಗ
ಬಾಲರಾಧೆ
1.ಗಾನವಿ
2.ದಿಷಿತಾ
ಬಾಲಗೋಪಾಲ
1.ಚಾರ್ವಿಕ್
2.ಆಶಿಶ್
3.ತ್ರಿಶೂಲ್
ಯು.ಕೆ.ಜಿ. ವಿಭಾಗ
ಬಾಲರಾಧೆ
1.ನಿಧಿಮಾ
2.ಐಕ್ಯ
3.ಸ್ಪೂರ್ತಿ
ಬಾಲಗೋಪಾಲ
1.ಜ್ಞಾನ
1ನೇ ತರಗತಿ
ಬಾಲರಾಧೆ
1.ದೃತಿ
1ಹಂಶಿಕಾ
2.ಲಚಿತಾ
3.ಅಹನಾ
ಬಾಲಗೋಪಾಲ
1.ಆರ್ಯ
2.ಮನನ
3.ಪೃಥ್ವಿರಾಜ್
2ನೇ ತರಗತಿ
ಬಾಲರಾಧೆ
1.ಸಾನ್ವಿ ರಮೇಶ್
2.ರಿಷಿಕಾ
3.ಅದ್ವಿಕಾ
ಬಾಲಗೋಪಾಲ
1.ಮೋಹಿತ್
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಕುಮಾರಿ ಮೈನಾ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಸಿಜಿ ವಿ.ಪಿ. ವಂದಿಸಿದರು.
ಕಾರ್ಯಕ್ರಮದಲ್ಲಿ ಸಹಶಿಕ್ಷಕರು, ಪಾಲಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಮಕ್ಕಳ ಉತ್ಸಾಹವನ್ನು ಹೆಚ್ಚಿಸಿದರು. ಶ್ರೀಕೃಷ್ಣನ ಬಾಲ್ಯಲೀಲೆಗಳನ್ನು ಪ್ರತಿಬಿಂಬಿಸುವ ಮೂಲಕ ಪುಟಾಣಿ ಮಕ್ಕಳ ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಕಲ್ಪಿಸಿದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

