


ಕೋಲಾರ:- ನಗರಸಭೆಯಲ್ಲಿ ಕಳೆದ 25 ವರ್ಷಗಳಿಂದ ನೀರು ಸರಬರಾಜು ಕಾಯಕದಲ್ಲಿ ನಿರತರಾಗಿದ್ದ ಗೌರಿಪೇಟೆಯ ಆರ್.
ವೆಂಕಟಾಚಲಪತಿ ಅಲಿಯಾಸ್ ಶ್ರೀನಿವಾಸ್ ವಯೋ ನಿವೃತ್ತಿ ಹೊಂದಿದ್ದು, ಅವರನ್ನು ಕೋಲಾರ ನಗರದ 15ನೇ ವಾರ್ಡ್ನಲ್ಲಿ ಕಸ್ತೂರಿ ಕನ್ನಡ ಸಂಘದ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವಲ್ಲಿನ ಬದ್ದತೆ, ಸಮಯಪ್ರಜ್ಞೆ, ಜನತೆಯೊಂದಿಗೆ ಹೊಂದಿದ್ದ ಒಡನಾಟ, ಮಾತಿನಲ್ಲಿ ಹಿಡಿತದ ಕುರಿತು ಸ್ಮರಿಸಿ, ನೀರಿನ ಸಂಕಷ್ಟದ ಸಮಯದಲ್ಲೂ ಸಮರ್ಪಕ ಹಾಗೂ ಸಮಾನವಾಗಿ ನೀರುಸರಬರಾಜು ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕಸ್ತೂರಿ ಕನ್ನಡ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದು, ನಿವೃತ್ತನೌಕರರಾದ ವೆಂಕಟಾಚಲಪತಿ ಅಲಿಯಾಸ್ – ಶ್ರೀನಿವಾಸರವರ ಸೇವೆಯನ್ನು ಶ್ಲಾಘಿಸಿ, ಗೌರವಿಸಿದರು.

