


ಕೋಲಾರ:- ಕೋಲಾರದ ಕೀಲುಕೋಟೆಯ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಆವರಣ, ಪ್ರಬೋಧ ಸೇವಾ ಸಮಿತಿ ಹಾಗೂ ಹಿಂದೂ ಜ್ಞಾನ ವೇದಿಕೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ-2026ರ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈಗಾಗಲೇ ವೇದಿಕೆ ಸಿದ್ದಪಡಿಸಲಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೆ.4ರಿಂದ ಸೆ.7ರವರೆಗೆ ಕಾರ್ಯಕ್ರಮಗಳು ನಡೆಯಲಿದ್ದು, ಸೆ.7ರಂದು ಸೋಮವಾರ ಮಧ್ಯಾಹ್ನ 2 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಕೋಲಾರದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಆವರಣ, ಎನ್. ರಾಮಯ್ಯ ಲೇಔಟ್, ಅಂತರಗಂಗೆ ರಸ್ತೆ, ಅಶ್ವಿನಿ ನರ್ಸಿಂಗ್ ಹೋಮ್ ಹತ್ತಿರ ಕಾರ್ಯಕ್ರಮಗಳು ಜರುಗಲಿವೆ.
ಸೆ.4ರಿಂದ ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಪೂಜಾ ಕಾರ್ಯಕ್ರಮ, ಭಗವದ್ಗೀತೆ ಜಪ ಮತ್ತು ಭಕ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಲ್ಲಕ್ಕಿ ಉತ್ಸವದ ದಿನದಂದು ಊರಿನ ಪ್ರಮುಖ ಬೀದಿಗಳಲ್ಲಿ ಭಗವಾನ್ ಶ್ರೀಕೃಷ್ಣನ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ನಡೆಸಲಾಗುವುದು.
ಈ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಕೃಷ್ಣನ ಆಶೀರ್ವಾದ ಪಡೆದು, ತೀರ್ಥ-ಪ್ರಸಾದ ಸ್ವೀಕರಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಆಯೋಜಕರಾದ ತ್ರೈತ ಸಿದ್ಧಾಂತ ಭಗವದ್ಗೀತಾ (ಟ್ರಸ್ಟ್) ಸೇವಾ ಟ್ರಸ್ಟ್, ಕೋಲಾರ ಶಾಖೆ ಹಾಗೂ ಸ್ಥಳೀಯ ಭಕ್ತರು. ದೂ .9964679324, 8147642290, 9902095526, 8147158272.ಸಂಪರ್ಕಿಸಲು ಕೋರಲಾಗಿದೆ.

