

ಕುಂದಾಪುರ: ಇಂದಿನ ಯುಗದಲ್ಲಿ ಪದವಿ ಜೊತೆ ವಿವಿಧ ಕೌಶಲ್ಯಗಳು ಉದ್ಯೋಗ ಪಡೆಯುವಲ್ಲಿ ಸಹಕಾರಿಯಾಗುತ್ತದೆ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿಗಳಾದ ಡಾ.ನಾರಾಯಣ ಸಭಾಹಿತ ಅಭಿಪ್ರಾಯ ಪಟ್ಟರು .
ಅವರು ಆಗಸ್ಟ್ 29ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್ ವಿಭಾಗಗಳ ಸಹಯೋಗದಲ್ಲಿ ನಡೆದ “ಎಮ್. ಎಸ್. ಡಿ.ಸಿ ಯಿಂದ ಕೌಶಲ್ಯ ಅಭಿವೃದ್ಧಿ” ಓರಿಯಂಟೇನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರಕಾರವು ಸಹ ಈ ನಿಟ್ಟಿನಲ್ಲಿ ಸಾಕಷ್ಟು ಅವಕಾಶಗಳಿವೆ ಇಂದಿನ ಯುವಜನತೆಗೆ ಒದಗಿಸಿಕೊಟ್ಟಿದೆ. ಅದನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಮೂಲಕ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ರಾಜೇಶ್ವರಿ ಆನಂದನ್ ಮಾತನಾಡಿ ಉದ್ಯೋಗ ಪಡೆಯುವಲ್ಲಿ ಕೌಶಲ್ಯ ಎನ್ನುವುದು ತುಂಬಾ ಮುಖ್ಯ. ಪದವಿಯ ಆರಂಭದಲ್ಲಿ ವಿವಿಧ ಕೌಶಲ್ಯವನ್ನು ಕುರಿತು ಕೋರ್ಸ್ ತೆಗೆದುಕೊಳ್ಳುವ ಅದರಲ್ಲಿ ಪರಿಣತಿ ಪಡೆದಾಗ ಉದ್ಯೋಗ ಅವಕಾಶಗಳು ಹೆಚ್ಚಾಗುತ್ತದೆ. ಅಲ್ಲದೇ ಎಮ್ ಎಸ್ ಡಿ ಸಿ ನೀಡುವ ಕೆಲವು ಉಪಯುಕ್ತ ಕೋರ್ಸ್ ಗಳ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಪ್ರಜ್ಞಾ ಪಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ಪರಿಚಯಿಸಿದರು.



