

ಮಂಗಳೂರು: ಇಲ್ಲಿನ ಪ್ರತಿಷ್ಠಿತ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಮಾ. ಶೌರ್ಯ ಅವರು ‘ಗೇಲ್ ಗಾಟ್ ಟ್ಯಾಲೆಂಟ್ 3.0’ (GGT 3.0 – Junior) ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮುವ ಮೂಲಕ ಶಾಲೆ ಹಾಗೂ ಕರಾವಳಿ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.
ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ವರ್ಣರಂಜಿತ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿ
ತಮ್ಮ ಅತ್ಯುತ್ತಮ ಯೋಗಾಸನ ಪ್ರದರ್ಶನದ ಮೂಲಕ ತೀರ್ಪುಗಾರರು ಹಾಗೂ ಪ್ರೇಕ್ಷಕರ ಮನಗೆದ್ದ ಅವರು, ಅಂತಿಮವಾಗಿ ವಿಜಯದ ಕಿರೀಟವನ್ನು ಮುಡಿಗೇರಿಸಿಕೊಂಡರು.
ಸಮಾರಂಭದಲ್ಲಿ ಗೇಲ್ (ಇಂಡಿಯಾ) ಲಿಮಿಟೆಡ್ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು (CMD) ಶೌರ್ಯ ಅವರಿಗೆ ವಿಜೇತರ ಪದಕ ಮತ್ತು ಟ್ರೋಫಿಯನ್ನು ನೀಡಿ ಗೌರವಿಸಿದರು.
ಶೌರ್ಯ ಅವರ ಈ ಅಪರೂಪದ ಹಾಗೂ ಹೆಮ್ಮೆಯ ಸಾಧನೆಗೆ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ., ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮಾ.ಶೌರ್ಯ ಅವರ ಈ ಅದ್ಭುತ ಸಾಧನೆಯು ಶಾಲೆಯ ಶೈಕ್ಷಣಿಕ ಪಯಣದಲ್ಲಿ ಮತ್ತೊಂದು ಹೆಮ್ಮೆಯ ಹಾಗೂ ಸ್ಮರಣೀಯ ಮೈಲಿಗಲ್ಲಾಗಿ ದಾಖಲಾಗಿದೆ.
Young Gonzagaite Shaurya Wins GAIL Got Talent 3.0 – Junior

St Aloysius Gonzaga School, Mangaluru proudly congratulates Shaurya of Class VII on emerging as the Winner of GAIL Got Talent 3.0 (GGT 3.0 – Junior).
Shaurya showcased his exceptional talent at the Grand Finale held at Bharat Mandapam, New Delhi, where he was felicitated with the Winner’s Medal and Trophy by the CMD of GAIL (India) Limited.
His remarkable achievement has brought immense pride and joy to the entire Gonzaga family. The school congratulates Shaurya on this outstanding accomplishment and wishes him continued success in his artistic journey.




