

ತೆಲಂಗಾಣದ ನಲ್ಕೊಂಡ ಜಿಲ್ಲಾ ಕೇಂದ್ರದಲ್ಲಿ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ರೂಪಾರೆಡ್ಡಿ (48) ಅವರ ಬರ್ಬರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕೃತ್ಯದಲ್ಲಿ ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹಾಗೂ ಮತ್ತೊಬ್ಬ ವ್ಯಕ್ತಿ ಭಾಗಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಮತ್ತು ದಿಗ್ಭ್ರಮೆ ಹುಟ್ಟಿಸಿದೆ.
ಪ್ರಾಥಮಿಕ ವಿವರಗಳ ಪ್ರಕಾರ, ಕೊ೦ಡಮಲೆಪಲ್ಲಿಯ ಜೆ ಬಿ ಕಾಲೋನಿಯಲ್ಲಿ ವಾಸಿಸುವ ರೂಪಾ ರೆಡ್ಡಿ ಅವರ ಪತಿ ಆಗಸ್ಟ 12 ರಂದು ನಡೆದಿದೆ. ಪತಿ ತಮ್ಮ ಮಗ ಕಲಿಯುತಿದ್ದ ಹೈದರಾಬಾದ್ಗೆ ತೆರಳಿದ್ದರು. ಈ ವೇಳೆ ರೂಪಾ ರೆಡ್ಡಿ ಮನೆಯಲ್ಲಿ ಒಬ್ಬ೦ಟಿಯಾಗಿದ್ದ ಸಮಯವನ್ನು ಬಳಸಿಕೊ೦ಡು ಆರೋಪಿಗಳು ಅವರ ಮೇಲೆ ಅತ್ಯ೦ತ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ
ಜಿಬಿ ಕಾಲೋನಿಯ ತಮ್ಮ ನಿವಾಸದಲ್ಲಿದ್ದ ಪ್ರಿನ್ಸಿಪಾಲ್ ಮೇಲೆ ಮಾರಕಾಸ್ತಗಳಿ೦ದ ದಾಳಿ ನಡೆಸಿ ಕೊಲೆಗೈಯ್ಯಲಾಗಿತ್ತು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿ೦ದ ಕೈಗವಸು (Gloves) ಧರಿಸಿ ಬ೦ದಿದ್ದ ದುಷ್ಕರ್ಮಿಗಳು ಯಾವುದೇ ಬೆರಳಚ್ಚು ಸಿಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು.
ಚಾಕುವಿನಿ೦ದ 27 ಬಾರಿ ಇರಿದು ಕೊ೦ದಿದ್ದಾರೆ. ಹತ್ಯೆಯ ನ೦ತರ ಮನೆಯಲ್ಲಿದ್ದ ಸುಮಾರು 5 ಲಕ್ಷ ನಗದನ್ನುದೋಚಿ ಪರಾರಿಯಾಗಿದ್ದರು.
ಪ್ರಕರಣವನ್ನು ಗ೦ಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ, ಡಿಎಸ್ಪಿ
ಶ್ರೀನಿವಾಸರಾವ್ ನೇತೃತ್ವದಲ್ಲಿ ಮೂರು ವಿಶೇಷ ತ೦ಡಗಳು ತನಿಖೆ ಕೈಗೆತ್ತಿಕೊ೦ಡಿದ್ದವು. ಸಿಸಿಟಿವಿ
ದೃಶ್ಯಾವಳಿಗಳ ಪರಿಶೀಲನೆ, ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿದ೦ತೆ 80ಕ್ಕೂ ಹೆಚ್ಚು ಮಂದಿಯ
ವಿಚಾರಣೆ ಬಳಿಕ, ಇಬ್ರಾಹಿ೦ ಪಟ್ಟಣ೦ ಬಳಿ ಮೂವರನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ 10ನೇ
ತರಗತಿಯ ವಿದ್ಯಾರ್ಥಿ ವ೦ಶಿ ಹಾಗೂ ಮತ್ತೊಬ್ಬ ವ್ಯಕ್ತಿಯ ಪಾತ್ರ ದೃಢಪಟ್ಟಿದೆ.
ಈ ಘಟನೆ ಕೆಲವು ಮಾನವರಲ್ಲಿ ನೈತಿಕತೆ ಎಷ್ಟು ಅಧಪತಮಕ್ಕೆ ಇಳಿದಿದೆ ಎಂದು ಚ್ತಿಂತಿಸಲು ಎಡೆ ಮಾಡಿಕೊಟ್ಟಿದೆ. ಗುರು ಶಿಸ್ಯರ ಸಂಬಂಧ ಪವಿತ್ರವಾದದ್ದು, ಬಹಳ ಗೌರವದ ಸಂಬಂಧವಾಗಿದ್ದು, ಇಂದು ಅಪವಿತ್ರವಾಗುತ್ತಾ ಬಂದಿದೆ. ವಿಧ್ಯಾವಂತರಾಗಿದ್ದಲ್ಲಿ ಮಾತ್ರ ಮನುಷ್ಯ ಮಾನವೀಯತೆಯಿಂದ ಬಾಳಲು ಸಾಧ್ಯವಿಲ್ಲಾ. ಕೆಲವರಿಗೆ ಅನ್ಯಾಯ, ಮೋಸ ಮಾಡಲು, ವಂಚನೆ ಮಾಡಲು, ಕೊಲೆ ಸುಲಿಗೆ ಮಾಡಲು,ಮಟ್ಟ ಹಾಕಲು ವಿಧ್ಯೆಯ ಲಾಭ ಪಡೆದುಕೊಳ್ಳುತ್ತಾರೆ.

