

ಕುಂದಾಪುರ, ಅ.18: ಮಿಲಾಗ್ರಿಸ್ ಕ್ರೆಡಿಟ್ ಸೌರ್ಹಾದ್ ಕೋ-ಆಪ್ ಸೊಸೈಟಿ ಲಿ. ಇವರಿಂದ ಮಿಲಾಗ್ರಿಸ್ ಸೌರ್ಹಾದ ಸೊಸೈಟಿಯಿಂದ ಕುಂದಾಪುರದ ಚೈತನ್ಯ ವಿಶೇಷ ಶಾಲೆಗೆ ಕಲಿಕಾ ವಸ್ತುಗಳ ಕೊಡುಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಕುಂದಾಪುರ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಮುಖ್ಯ ಅಥಿತಿಗಳಾಗಿ ಆಗಮಿಸಿ ವಿಶೇಷ ಚೈತನ್ಯ ಮಕ್ಕಳಿಗೆ ಕೊಡುಗೆಯನ್ನು ವಿತರಿಸಿ ‘ವಿಶೇಷ ಮಕ್ಕಳಿಗೆ ನೋಡಿಕೊಳ್ಳುವಂತಹ ಶಿಕ್ಷಕರು, ಶಿಕ್ಷಕೇತರರ ಸೇವೆ, ದೇವರು ಮೆಚ್ಚುವಂತಹ ಕೆಲಸ, ಇಂತಹ ಸೇವೆ ನೀಡಲು ತಾಳ್ಮೆ, ಪ್ರೀತಿ, ವಾತ್ಸಲ್ಯ ಬೇಕಾಗುತ್ತದೆ, ಯೇಸು ಕ್ರಿಸ್ತರು ಆಶಿಸಿದ ಕೆಲಸ ಇದು ಎನ್ನುತ್ತಾ, ಮಿಲಾಗ್ರಿಸ್ ಕ್ರೆಡಿಟ್ ಸೊಸೈಟಿ ಬರೆ ಲಾಭವನ್ನು ನೋಡದೆ, ಅವರಿಗೆ ಸಿಕ್ಕ ಲಾಭದಲ್ಲಿ ಇಂತಹ ಹಲವಾರು ಸಂಸ್ಥೆಗಳಿಗೆ ಸಹಾಯ ಹಸ್ತ ನೀಡುತ್ತಾರೆ’ ಎಂದು ಆಡಳಿತ ಮಂಡಳಿಗೆ ಸಿಬಂದಿ ವರ್ಗಕ್ಕೆ, ಮತ್ತು ಶಾಲಾ ಶಿಕ್ಷಕರಿಗೆ ಶುಭ ಕೋರಿದರು . ಹಿರಿಯ ವಕೀಲರಾದ ಭುಜಂಗ ಶೆಟ್ಟಿ ಮಾತನಾಡಿ ‘ ಇಲ್ಲಿನ ಶಿಕ್ಷಕರು ದೆವರು ಒಪ್ಪುವಂತಹ ಕೆಲಸ ಮಾಡುತ್ತಾರೆ, ಆರೋಗ್ಯದಿಂದ, ಸಮಚಿತ್ತದ ಮಕ್ಕಳಿಗೆ, ವಿಧ್ಯೆ ನೀಡುವುದು ಕಷ್ಟದ ಕೆಲಸವಲ್ಲಾ, ಆದರೆ ವಿಶೇಷ ಮಕ್ಕಳಿಗೆ ತರಬೇತಿ ನೀಡುವುದು ಎಂದರೆ ಅತೀ ಕಷ್ಟದ ಕೆಲಸ, ಅವರನ್ನು ತರಬೇತಿಗೊಳಿಸಿ, ಸಮಾಜದ ಮುಖ್ಯ ವಾಹಿನಿಗೆ ತರುವುದು ಬಹಳ ಶ್ರೇಷ್ಟ ಕೆಲಸ ಎಂದು ಅಭಿಪ್ರಾಯ ಪಟ್ಟರು.
ಭಾರತೀಯ ಸೇನೆಯಲ್ಲಿ ಸೇವೆ ನೀಡಿದ ಕರುಣಾಕರ ಬಸ್ರೂರು ಇವರು ಮಾತನಾಡಿ, ಸೇನೆಯಲ್ಲಿ ಹಲವಾರು ಸೈನಿಕರನ್ನು ನಾನು ತರಬೇತಿ ನೀಡಿದ್ದೇನೆ, ಆಗ ಬಹಳ ಕಶ್ಟ ಆಗುತಿತ್ತು, ಆದರೆ ಸೇನೆಯಲ್ಲಿ ತರಬೇತಿ ನೀಡುವ ಕೆಲಸಕ್ಕಿಂತ, ಇಲ್ಲಿನ ಮಕ್ಕಳಿಗೆ ತರಬೇತಿ ನೀಡುವ ಕೆಲಸ, ಕಶ್ಟದ ಕೆಲಸ’ ಎಂದು ಶಾಲೆಯ ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಇನ್ನೋರ್ವ ಅತಿಥಿ ವೆಂಕಟೇಶ್ ಟ್ರೆಡರ್ಸ್ ಮಾಲೀಕರಾದ ವೆಂಕಟೇಶ್ ಭಾಸಕರ ಶೆಣೈ ‘ವಿಶೇಷ ಮಕ್ಕಳಿಗೆ ತರಬೇತಿ ನೀಡುವ ಕೆಲಸ ಪುಣ್ಯದ ಕೆಲಸ’ ಎಂದು ಹೇಳಿದರು. ಸೊಸೈಟಿಯ ಕುಂದಾಪುರ – ಭಟ್ಕಳ ವಿಭಾಗದ ಅಭಿವ್ರದ್ದಿ ಅಧಿಕಾರಿ ರೋಹಿತ್ ಮೋಗೆರ್, ನಮ್ಮ ಸೊಸೈಟಿ ಬರೆ ಲಾಭವನ್ನು ನೋಡದೆ, ಸಾಮಜದ ಒಳಿತಿಗಾಗಿ ಇಂತಹ ಸಹಾಯವನ್ನು ವರ್ಷಪ್ರತಿ ಮಾಡಿಕೊಂಡು ಬರುತ್ತದೆ ಎಂದು ತಿಳಿಸಿದರು. ಮಿಲಾಗ್ರಿಸ್ ಸೊಸೈಟಿ ಶಿರೂರು ಶಾಖೆಯ ವ್ಯವಸ್ಥಾಪಕಿ ಶ್ವೇತಾ ದೇವಾಡಿಗ ಸಂಸ್ಥೆಯ ವಿಶೇಷತೆಯನ್ನು ತಿಳಿಸಿದರು.
ಮಿಲಾಗ್ರಿಸ್ ಕುಂದಾಪುರ ಶಾಖೆಯ ಜೋನ್ಸನ್ ಮಿನೇಜಸ್, ಶಾಖ ಸಿಬಂದಿಗಳಾದ ವೀಣಾ ರೊಡ್ರಿಗಸ್, ಶ್ವೇತಾ ದೇವಾಡಿಗ, ಪ್ರವಿಕ ಬರೆಟ್ಟೊ, ಪ್ರಿಯಾಂಕ ಡಿ.ಕೆ. ಸಹಕರಿಸಿದರು. ವಿಶೇಷ ಮಕ್ಕಳು ಸ್ವಾಗತ ಗೀತೆ ಹಾಡಿ, ನ್ರತ್ಯ ಪ್ರದರ್ಶನ ಹಾಡುಗಾರಿಕೆ ನಡೆಸಿಕೊಟ್ಟರು.
ಮಿಲಾಗ್ರಿಸ್ ಸೊಸೈಟಿಯ ಕುಂದಾಪುರ ಶಾಖೆಯ ವ್ಯವಸ್ಥಾಪಕ ಶ್ರೀಧರ್ ಸ್ವಾಗತಿಸಿದರು, ವೀಣಾ ಖಾವಿ೯ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಪ್ರಾಂಶುಪಾಲರಾದ ಲೀಲಾವತಿ ಕರ್ಕಡ ವಿಶೇಷ ಶಾಲೆಯ ಬಗ್ಗೆ ತಿಳಿಸಿ ವಿಶೇಷ ಮಕ್ಕಳಿಗೆ ಮೊದಲು ಕುಳಿತುಕೊಳ್ಳಲು, ತಿನ್ನಲು ಮತ್ತಿತರ ವಿಷಯಗಳನ್ನು ಮನದಟ್ಟು ಮಾಡಿಸಿದ ನಂತರ ಅವರನ್ನು ಶಿಕ್ಷಣಕ್ಕೆ ಹೊಂದಿಸಬೇಕು ಎಂದು ತಿಳಿಸಿ, ವಂದಿಸಿದರು.































