


ಕೋಟ: ಅಗಸ್ಟ್ ೧೬ ಭಾನುವಾರದಂದು ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ನವೀಕ್ರತಗೊಳಿಸಿದ ಬಲಿಪೀಠದ ಹಿನ್ನೆಲೆ ವಿನ್ಯಾಸ ಹಾಗೂ ಸಂತ ಜೋಸೆಫರ ಪವಿತ್ರ ವಿಗ್ರಹದ ಮಂಟಪದ ಆಶೀರ್ವಚನ ಕಾರ್ಯಕ್ರಮ ನಡೆಯಿತು.
ಮೊದಲಿಗೆ ಇಗರ್ಜಿಯ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಸಂಭ್ರಮಿಕ ಬಲಿಪೂಜೆಯನ್ನು ನೆರವೇರಿಸಿದರು. ಪೂಜೆಯ ನಂತರ ವಿವಿಧ ಕಾಮಗಾರಿಗಳಿಗೆ ಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಕಾಮಗಾರಿಯ ಕೆಲಸವನ್ನು ಮಾಡಿದ ಕುಶಲಕರ್ಮಿಗಳನ್ನು ಸಹಾ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಹೊಸದಾಗಿ ನಿರ್ಮಿಸಲಾದ ಸುಸಜ್ಜಿತ ಶೌಶಾಲಯವನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಜುಲಿಯಾನ ಡಿಜೋಜ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಹೆರಾಲ್ಡ್ ಫೆರ್ನಾಂಡಿಸ್ ಅವರು ಧನ್ಯವಾದ ಸಮರ್ಪಣೆ ಮಾಡಿದರು










































