

ಬೈಂದೂರು; 80 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಬೈಂದೂರು ಹೋಲಿ ಕ್ರಾಸ್ ಚರ್ಚ್ ನಲ್ಲಿ ಬಲಿಪೂಜೆಯನ್ನು ನೆರವೇರಿಸಿದ ಬಳಿಕ ಸಮಸ್ತ ಕ್ರೈಸ್ತ ಬಾಂಧವರು ಹೋಲಿ ಕ್ರಾಸ್ ಕನ್ನಡ ಮಾಧ್ಯಮ ಶಾಲಾ ವಠಾರದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದು, ಮುಖ್ಯ ಅತಿಥಿಯಾಗಿ ವಂದನೀಯ ಧರ್ಮಗುರುಗಳು ಡೆನಿಸ್ ಡಿಸೋಜರವರು ಧ್ವಜಾರೋಹಣವನ್ನು ನೆರವೇರಿಸಿದ್ದು, ಭಾರತೀಯರಾದ ನಾವು ಸಾರ್ವಭೌಮತ ಹಾಗೂ ಏಕತೆಯಿಂದ ನಮ್ಮ ಹಕ್ಕುಗಳನ್ನು ರಕ್ಷಿಸುವ ಮೂಲಕ ಸಮಾಜದ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿ ದೇಶಕ್ಕೆ ಕೊಡುಗೆಯನ್ನು ನೀಡಬೇಕು ಹಾಗೂ ನಮ್ಮ ದೇಶ ಹೆಮ್ಮೆ ಪಡುವಂತೆ ಮಾಡಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಶುಭಾಶಯ ಕೋರಿದರು. ನೆರೆದವರನ್ನು ಸ್ವಾಗತಿಸಿದ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸ್ಟೇಪನ್ ಡಾಯಸ್, ಆಯೋಗದ ಸಂಯೋಜಕಿ ಶ್ರೀಮತಿ ಜೊಸ್ಪಿನ್ ರೊಡ್ರಿಗಸ್, ಧರ್ಮಭಗಿನಿ ಆನ್ಸಿ ಪಾವ್ಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನೆರೆದವರಿಗೆ ಸಿಹಿ ವಿತರಿಸಿದ್ದು, ರೊನಾಲ್ಡ್ ರಾಜೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದ್ದು, ಸಂಯೋಜಕಿ ಜೊಸ್ಪಿನ್ ರವರು ವಂದಿಸಿದರು.

