

ಗಂಗೊಳ್ಳಿ ದಿನಾಂಕ 15.08.2026ರಂದು ಸ್ಟೆಲ್ಲಾಮಾರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಾದ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ, ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕನ್ನಡ ಮಾಧ್ಯಮ ಪ್ರೌಢಶಾಲೆಗಳು ಒಗ್ಗೂಡಿ ಬಹು ಅರ್ಥಪೂರ್ಣವಾಗಿ ಸಂಭ್ರಮ ಮತ್ತು ಸಡಗರದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿ ಕಂದಾವರ,ಮಾಜಿ ಸೈನಿಕರು ಧ್ವಜಾರೋಹಣಗೈದು “ಪ್ರತಿಯೊಬ್ಬ ವಿದ್ಯಾರ್ಥಿಗಳು ಭಾರತಾಂಬೆಯ ಅತ್ಯಮೂಲ್ಯ ಆಸ್ತಿ” ಎಂದರು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ -ಶಿಕ್ಷಕೇತರವೃಂದದವರಿಂದ’ ಜಲ ಸಂರಕ್ಷಣೆ ‘ಪ್ರತಿಜ್ಞೆ ಕೈಗೊಳ್ಳಲಾಯಿತು. ವಿದ್ಯಾರ್ಥಿಗಳು ದೇಶಭಕ್ತಿಯನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಉಭಯಶಾಲಾ ಜಂಟಿ ಕಾರ್ಯದರ್ಶಿಗಳಾದ ಭಗಿನಿ. ಸನೀಷಾ, ಭಗಿನಿ.ಗ್ರೇಸಿ ಲೋಬೋ, ಮುಖ್ಯೋಪಾಧ್ಯಾಯನೀಯರಾದ ಭಗಿನಿ ಕ್ರಸೆನ್ಸ್ ಮತ್ತು ಭಗಿನಿ.ವಿಜಯ ಕ್ರಾಸ್ತಾ, ಶಿಕ್ಷಕ- ಶಿಕ್ಷಕೇತರವೃಂದದವರು ಮತ್ತು ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು . ಮುಖ್ಯ ಅತಿಥಿ ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿಯವರಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

