

ಕೊಲ್ಲೂರು: ಕೊಲ್ಲೂರಿನ ಕೆಲವೆಡೆ ಲಘು ಭೂ ಕಂಪನವಾಗಿರುವುದಾಗಿ ನಿವಾಸಿಗಳು ತಿಳಿಸಿದ್ದಾರೆ. ಮಂಗಳವಾರಮಧ್ಯಾಹ್ನ 3.20ರ ಸುಮಾರಿಗೆ ಮನೆಯು ಲಘುವಾಗಿ ಕಂಪಿಸಿದ ಅನುಭವವಾಗಿದ್ದು, ಕೊಲ್ಲೂರು ನಗರ, ಕಲ್ಯಾಣಿಗುಡ್ಡೆ, ಹಳ್ಳಿಬೇರು ಮುಂತಾದ ಕಡೆ10 ಸೆಕುಂಡುಗಳ ಕಾಲ ಭೂಮಿ ಕಂಪಿಸಿದೆ, ಪಾತ್ರೆಗಳು ನೆಲಕ್ಕೆ ಬಿದ್ದವು. ಭಯದಿಂದ ಮನೆಯ ಹೊರಗಡೆ ಓಡಿರುವುದಾಗಿ ಹೆಗ್ಡೆ ಹಕ್ಲು ನಿವಾಸಿ ಚಂದ್ರ ಬಳೇಗಾರ್ ತಿಳಿಸಿದ್ದಾರೆ. ಕೊಲ್ಲೂರು ನಿವಾಸಿ ರಮೇಶ ಕುಂದರ್, ರಿಕ್ಷಾ ಚಾಲಕ ರಾಜು, ಸುದರ್ಶನ ಜೋಯಿಸ್ ಭೂಮಿ ಕಂಪಿಸಿದ ಅನುಭವ ಹಂಚಿಕೊಂಡಿದ್ದಾರೆ. ಕಲ್ಯಾಣಿ ಗುಡ್ಡೆಯಲ್ಲಿಯೂ ಇದೇ ಅನುಭವ ಅಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇನ್ನೂ ಕೆಲವರು ಆಗಸದಲ್ಲಿ ಭಾರೀ ಗುಡುಗಿನ ಸದ್ದು ಕೇಳಿರುವುದಾಗಿ ತಿಳಿಸಿದ್ದಾರೆ. ಇಲಾಖೆಗೆ ಆ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಉಡುಪಿ ವಿಪತ್ತು ನಿರ್ವಹಣ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ದೇಗುಲ ಪರಿಸರದಲ್ಲಿ ಯಾವುದೇ ರೀತಿಯ ಕಂಪನದ ಅನುಭವ ಆಗಿಲ್ಲವೆಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಇಲಾಖೆಗೆ ಆ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಉಡುಪಿ ವಿಪತ್ತು ನಿರ್ವಹಣ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

