


ಕೋಲಾರ: ಕಲಿಯುವ ಯಾವುದೇ ಅವಕಾಶವನ್ನು ವಿದ್ಯಾರ್ಥಿಗಳು ತಪ್ಪಿಸಿಕೊಳ್ಳದೆ ಜ್ಞಾನವಂತರಾದರೆ ಪೈಪೆÇೀಟಿ ಜಗತ್ತಿನಲ್ಲಿ ಸ್ಪರ್ಧೆಗಳನ್ನು ಎದುರಿಸುವುದು ಸುಲಭವಾಗುತ್ತದೆ ಎಂದು ಕೋಲಾರ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಆರೆಂಜ್ ಆರ್ಮಿ ಕೋಲಾರ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನಡೆದ ಅಂತರ ಕಾಲೇಜು ಮಟ್ಟದ ಮೈ ಭಾರತ್ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.
ಜೀವ ಸೃಷ್ಟಿಯ ಪ್ರಾಕೃತಿಕ ಜಗತ್ತಿನಲ್ಲಿ ಸ್ಪರ್ಧೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದ್ದು, ಸ್ಪರ್ಧೆಗೆ ಒಗ್ಗಿಕೊಳ್ಳದ ಜೀವಿ ಸಹಜವಾಗಿಯೇ ನಶಿಸಿ ಹೋಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡು ಸ್ಪರ್ಧೆಗೆ ಸದಾ ಸನ್ನದ್ಧರಾಗಿರಬೇಕು ಎಂದು ಅವರು ತಿಳಿಸಿದರು.
ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲಾ ರೀತಿಯಲ್ಲಿ ಸ್ಥಿರಪಟ್ಟವರು ಸಮಾಜ ಸೇವೆಗೆ ಬರುವುದನ್ನು ನೋಡುತ್ತೇವೆ ಆದರೆ, ತಮ್ಮ ಬೆಳವಣಿಗೆಯ ಹಂತದಲ್ಲಿಯೇ ಸಮಾಜ ಸೇವೆಯನ್ನು ಬೆಳವಣಿಗೆಯ ಒಂದು ಭಾಗವಹಿಸಿ ಪರಿಗಣಿಸಿ ಯುವ ಪಡೆ ಸೇರೆ ಆರೆಂಜ್ ಆರ್ಮಿ ಕೇರ್ ಸಂಸ್ಥೆಯನ್ನು ಸ್ಥಾಪಿಸಿಕೊಂಡು ವೈವಿಧ್ಯಮಯ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ, ಇಂದು ನಡೆಸಿರುವ ಭಾರತ್ ಕ್ವಿಜ್ ಅತ್ಯುತ್ತಮ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮಾದರಿಯಾಗಿದ್ದು, ಇದರಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳಿಗೆ ಮುಂದಿನ ಹಂತದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತದೆ ಎಂದರು.
ಸೋಲು ಗೆಲುವು ಜೀವನದ ಸಹಜ ಪ್ರಕ್ರಿಯೆಯಾಗಿದ್ದು, ಸೋತಾಗ ಕುಗ್ಗದೆ, ಗೆದ್ದಾಗ ಮೆರೆಯದೆ ಸೋಲು ಗೆಲುವನ್ನು ಸಮಾನವಾಗಿ ಸ್ಪೀಕರಿಸಿ ಮುಂದಿನ ಪೈಪೆÇೀಟಿ ಹಾಗೂ ಸ್ಪರ್ಧೆಗಳಿಗೆ ಸಜ್ಜಾಗುವ ಮನಸ್ಥಿತಿಯನ್ನು ರೂಢಿಸಿಕೊಂಡರೆ ವಿದ್ಯಾರ್ಥಿಗಳು ಜೀವನದ ಗುರಿಯನ್ನು ತಲುಪಲು ಸುಲಭವಾಗುತ್ತದೆ ಎಂದರು.
ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಸಿದ ಮೈ ಭಾರತ್ ಕ್ವಿಜ್ ಸ್ಪರ್ಧೆಯು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿವೆ ಎಂದು ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕರಾದ ವರಲಕ್ಷ್ಮಿ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂದು ಈ ಸ್ಪರ್ಧೆಯಿಂದ ತಿಳಿದುಕೊಳ್ಳಬೇಕು ಎಂದ ಅವರು, ಈ ರೀತಿಯ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದ ಆರೆಂಜ್ ಆರ್ಮಿ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಆರೆಂಜ್ ಆರ್ಮಿ ಕೋಲಾರ ತಂಡದ ಅಧ್ಯಕ್ಷ ಹರೀಶ್.ಎಂ ಮಾತನಾಡಿ, ಸಮಾಜದಲ್ಲಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿಯೇ ಆರೆಂಜ್ ಆರ್ಮಿಯನ್ನು ಸಮಾನ ಮನಸ್ಕ ತಂಡದೊಂದಿಗೆ ಆರಂಭಿಸಿದ್ದು, ತಂಡದ ಇತಿ ಮಿತಿಯಲ್ಲಿ ಸೇವಾ ಕಾರ್ಯಗಳನ್ನು ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಪ್ರಕಟಿಸಿದರು.
ಮೈ ಭಾರತ್ ಕ್ವಿಜ್ ಸ್ಪರ್ಧೆಯಲ್ಲಿ ರವಿ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ್.ಎಂ.ಎಸ್ ಪ್ರಥಮ ಬಹುಮಾನ 10 ಸಾವಿರ ರೂ, ನಗದು ಹಾಗೂ ಎಸ್ಡಿಸಿ ಕಾಲೇಜಿನ ಹರ್ಷಿತ.ಕೆ. ದ್ವಿತೀಯ ಬಹುಮಾನ 5 ಸಾವಿರ ರೂ ನಗದು ಮತ್ತು ಮಹಿಳಾ ಸಮಾಜ ಕಾಲೇಜಿನ ವಿದ್ಯಾಶ್ರೀ ತೃತೀಯ ಬಹುಮಾನ 3 ಸಾವಿರ ರೂ ನಗದು ಮತ್ತು ಪ್ರಶಂಸನಾ ಪತ್ರಗಳನ್ನು ಗಣ್ಯರಿಂದ ಸ್ಪೀಕರಿಸಿದರು.
ಕ್ವಿಜ್ ಸ್ಪರ್ಧೆಯಲ್ಲಿ 27 ಕ್ಕೂ ಹೆಚ್ಚು ಕಾಲೇಜುಗಳಿಂದ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆರೆಂಜ್ ಆರ್ಮಿ ಕಾರ್ಯದರ್ಶಿ ರವಿ ಚೇತನ್, ಮಾಧ್ಯಮ ಸಲಹೆಗಾರ ವೆಂಕಟೇಶ್ ಬಾಬಾ, ಸಂಚಾಲಕರಾದ ಪ್ರಶಾಂತ್, ಶ್ರಾವಣಿ, ಮಧು, ಹರ್ಷ, ಶರತ್, ಶ್ರೀಕಾಂತ, ಚರಣ್, ಆದರ್ಶ, ವಿನಯ್, ವಿಶ್ವಾಸ್, ವಿನೀತ್, ಮತ್ತಿತರರು ಹಾಜರಿದ್ದರು.

