

ಶ್ರೀನಿವಾಸಪುರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಾಸವಿ ಮಹಿಳಾ ಮಂಡಳಿ ವತಿಯಿಂದ ಏರ್ಪಡಿಸಿದ್ದ ಆಷಾಡಂ ಧಮಾಕಾ ಸೇಲ್ ಕಾರ್ಯಕ್ರಮವನ್ನು ಮಂಡಳಿಯ ಅಧ್ಯಕ್ಷೆ ವೈ.ಆರ್ಮಂಜುಳ ಶಿವಪ್ರಕಾಶ್ ಉದ್ಘಾಟಿಸಿದರು.
ಗಮನ ಸೆಳೆದ ಆಷಾಡಂ ಧಮಾಕಾ ಸೇಲ್
ಶ್ರೀನಿವಾಸಪುರ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಾಸವಿ ಮಹಿಳಾ ಮಂಡಳಿ ವತಿಯಿಂದ ಆಷಾಡಂ ಧಮಾಕಾ ಸೇಲ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಆರ್ಯ ವೈಶ್ಯ ಮಂಡಳಿ ಟ್ರಸ್ಟ್ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್ ಮಾತನಾಡಿ, ಸಮುದಾಯದ ಮಹಿಳೆಯರಲ್ಲಿ ಆರ್ಥಿಕ ವ್ಯವಹಾರ ಜ್ಞಾನ ಬೆಳೆಸುವ ಉದ್ದೇಶದಿಂದ ಸೇಲ್ಸ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದು ಹೊಸ ಅನುಭವ ನೀಡುತ್ತದೆ ಎಂದು ಹೇಳಿದರು.
ಐ್ರಸ್ಟ್ ಕಾರ್ಯದರ್ಶಿ ಕೆ.ವಿ.ಸೂರ್ಯನಾರಾಯಣಶೆಟ್ಟಿ ಮಾತನಾಡಿ, ಮಹಿಳೆಯರು ಕಾರ್ಯಕ್ರಮದಲ್ಲಿ ತಾವೇ ತಯಾರಿಸಿದ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವುದು ಇಲ್ಲಿನ ವಿಶೇಷ. ಶುಚಿ ಮತ್ತು ರುಚಿಯಾದ ತಿನಿಸುಗಳನ್ನು ನ್ಯಾಯಯುತವಾದ ಬಲೆಗೆ ಮಾರಾಟ ಮಾಡಲಾಗುತ್ತದೆ. ಗ್ರಾಹಕರು ಖರೀದಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಮಂಡಳಿ ಅಧ್ಯಕ್ಷೆ ವೈ.ಆರ್.ಮಂಜುಳ ಶಿವಪ್ರಕಾಶ್ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರು ಪೂರ್ಣ ಜ್ಞಾನದಿಂದ ಹಾಗೂ ವೃತ್ತಿಪರತೆಯಿಂದ ತಿಂಡಿ ತಿನಿಸು ತಯಾರಿಸಬೇಕು. ಗ್ರಾಹಕರ ಆರೋಗ್ಯ ಹಾಗೂ ರುಚಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ವೈ.ಆರ್.ನಾಗೇಂದ್ರಬಾಬು, ವೈ.ಆರ್.ಸಂಧ್ಯಾ ಮತ್ತು ವಾಸವಿ ಮಹಿಳಾ ಮಂಡಳಿ ಸದಸ್ಯರು ಇದ್ದರು.

