

ಬಸ್ರೂರು ಸೈಂಟ್ ಫಿಲಿಪ್ ನೇರಿ ಚರ್ಚಿನಲ್ಲಿ “ದಂಪತಿಗಳ ದಿನಾಚರಣೆ” ಪ್ರಯುಕ್ತ ಚರ್ಚಿನ ಧರ್ಮಗುರುಗಳಾದ ವಂ। ಫಾದರ್ ರೊಯ್ ಲೋಬೊ ಸಂದೇಶ ನೀಡಿ ದಾಂಪತ್ಯ ಜೀವನದಲ್ಲಿ ಸತಿಪತಿಗಳು ಒಬ್ಬರೊಬ್ಬರನ್ನು ಅರಿತು, ಒಬ್ಬರಿಗೊಬ್ಬರು ಪ್ರೀತಿಸಿ ಬಾಳಿ ಬೇರೆಯವರಿಗೆ ಮಾದರಿಯಾಗಬೇಕು. ಹಿರಿಯ ದಂಪತಿಗಳು ಕಿರಿಯ ದಂಪತಿಗಳಿಗೆ ಮಾರ್ಗದರ್ಶಕರಾಗಬೇಕು ಮತ್ತು ಹಿರಿಯರ ಸಲಹೆಗಳನ್ನು ಕಿರಿಯರ ದಂಪತಿಗಳು ಪಡೆಯುವಂತಾಗಬೇಕು ಆಗ ಬದುಕಿನ ಸಾರ್ಥಕತೆ ಸಾಧ್ಯ ಉತ್ತಮ ನೆಲದಲ್ಲಿ ಬಿತ್ತಿದ ನೆಲದಲ್ಲಿ ಉತ್ತಮ ಬೆಳೆ ಪಡೆಯಲು ಸಾಧ್ಯ ಎಂದರು ಈ ಸಂದರ್ಭದಲ್ಲಿ ಹೊಸದಾಗಿ ಸೇವೆ ಸಲ್ಲಿಸಲು ಆಗಮಿಸಿದ ದಿಯಾಕೊನ್ ಕೆನಾನ್ ಫೆರ್ನಾಂಡಿಸ್ ಇವರನ್ನು ಸ್ವಾಗತಿಸಲಾಯಿತು.


