

ಕುಂದಾಪುರ; “ಯಾವುದೇ ವಿಷಯದಲ್ಲಾದರೂ ತಾನು- ತನ್ನದು ಎಂಬ ಭಾವನೆ ಬಂದರೆ ಜವಾಬ್ಧಾರಿ ಬಂದು ಕರ್ತವ್ಯಗಳ ಅರಿವಾಗುತ್ತದೆ. ನಡೆನುಡಿ ಕಲಿಯಲು ಶಿಕ್ಷಣ ಸಂಸ್ಥೆಯೇ ಮೂಲಾಧಾರವಾಗಿದ್ದು, ಒಳ್ಳೆಯ ಗುಣಗಳನ್ನು ಕಲಿತು ದೀಪದ ಬೆಳಕಿನಂತೆ ಇನ್ನೊಬ್ಬರಿಗಾಗಿ ಬೆಳಗುತ್ತಿರಿ ” ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ‘ ನವ ಸಂಕೇತ್- 2026’ – ಫ್ರೆಷರ್ಸ್ ಡೇ ಫಿಯೆಸ್ಟಾ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕುಂದಾಪುರದ ವಿ.ಕೆ.ಆರ್. ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಯ ಆಂಗ್ಲಭಾಷಾ ಶಿಕ್ಷಕರಾದ ಶ್ರೀ ಕೆ. ಪರಮೇಶ್ವರ ಉಡುಪರವರು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ್ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿದ್ಯಾರ್ಥಿಗಳ ನಡೆನುಡಿ, ವರ್ತನೆಗಳು ಸಂಸ್ಥೆಯನ್ನು ಬಿಂಬಿಸುವಂತಿರಬೇಕು ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿ ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ ನಕ್ಕತ್ತಾಯರವರು ಹಿತನುಡಿಗಳೊಂದಿಗೆ ನವ ಸಂಕೇತ್ ಪ್ರೆಷರ್ಸ್ ಡೇ ಕಾರ್ಯಕ್ರಮಕ್ಕೆ ಶುಭಕೋರಿದರು. ಅರ್ಥಶಾಸ್ತ್ರ ಉಪನ್ಯಾಸಕಿ ನಾಗರತ್ನಾ ರವರು ಲಕ್ಕಿ ಸ್ಟುಡೆಂಟ್ ಆಫ್ ದಿ ಇಯರ್ ಕಾರ್ಯಕ್ರಮ ನಿರೂಪಿಸಿದರು. ರಸಾಯನಶಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನೀಸ್ ನತಾಶಾ ಡಿಸೋಝಾರರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರೂಪಿಸಿದರು.
ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ತಸ್ವಿ.ಎನ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸಂಜನಾ ಅತಿಥಿ ಪರಿಚಯ ಮಾಡಿದರು. ಫ್ರೆಷರ್ಸ್ ಡೇ ಯ ಅಂಗವಾಗಿ ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಉಪನ್ಯಾಸಕರಾದ ರೇವತಿ ಕಾಮತ್, ಸುಷ್ಮಾ ಶೆಣೈ, ದೀಪಾ ಶೆಟ್ಟಿ, ಜಾನೀಸ್ ನತಾಷಾ ಡಿಸೋಜಾ, ಸಿಂಧು ರವರು ಸಾಂಸ್ಕ್ರತಿಕ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಸಹಕರಿಸಿದರು. ವೈಷ್ಣವಿ ಮತ್ತು ಸಿಂಚನ ಧನ್ಯವಾದ ಸಲ್ಲಿಸಿದರು. ಅದಿತಿ ಅಡಿಗ ಮತ್ತು ಅನನ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

