

ಗಂಗೊಳ್ಳಿ ದಿನಾಂಕ 8. 7.2026 26ರಂದು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ 2026 27ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಮೊದಲಿಗೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಆರಂಭಗೊಂಡಿತು ಮುಖ್ಯ ಅತಿಥಿಗಳಾದ ಜಯರಾಮ ಖಾರ್ವಿ ಮಾತನಾಡುತ್ತಾ “ಶಾಲೆಯ ಶಿಸ್ತು ಮತ್ತು ಉತ್ತಮ ನಡವಳಿಕೆಗೆ ಶಾಲಾ ಸಂಸತ್ತು ಕೈಗನ್ನಡಿ” ಎಂದು ಹೇಳಿದರು. ಮುಖ್ಯೋಪಾಧ್ಯಾಯನಿ ಭಗಿನಿ ಕ್ರೆಸೆನ್ಸ್ ” ವಿದ್ಯಾರ್ಥಿಗಳು ಶಿಸ್ತು ಮತ್ತು ಕರ್ತವ್ಯ ಪಾಲನೆ ರೂಡಿಸಿಕೊಂಡಲ್ಲಿ ಸಮಾಜಕ್ಕೊಂದು ದೊಡ್ಡ ಕೊಡುಗೆಯಾಗುತ್ತಾರೆ ” ಎಂದು ಹೇಳಿದರು. ಶಾಲಾ ನಾಯಕನಾಗಿ ನವೀನ್ ಖಾರ್ವಿ, ಉಪನಾಯಕನಾಗಿ ಶ್ರೇಯಸ್ ಮೊಗವೀರ, ರಕ್ಷಣಾ ಮಂತ್ರಿ,ಯತೀಶ್ ಮೆಂಡನ್, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಂತ್ರಿ ಪ್ರತೀತಿ ,ವಾರ್ತಾ,ಸಂಪರ್ಕ ಮಂತ್ರಿ ಪೂರ್ಣಿಮಾ, ಸ್ವಚ್ಛತಾ ಮಂತ್ರಿ ಅಪೇಕ್ಷ ಶಿಸ್ತು ಮಂತ್ರಿ ಸಂಚಿತಾ ಖಾರ್ವಿ, ಆಹಾರ ಮಂತ್ರಿ ನಿರೀಕ್ಷಾ, ಕ್ರೀಡಾ ಮಂತ್ರಿ ಸಂಜನಾ, ವಿರೋಧ ಪಕ್ಷದ ನಾಯಕಿ ಪ್ರಕೃತಿ, ಸಹಾಯಕ ರಕ್ಷಣಾ ಮಂತ್ರಿ ಅನಿಷ್ಕ, ಸಹಾಯಕ ಶಿಸ್ತು ಮಂತ್ರಿ ದಿಶಾ, ಸಹಾಯಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಂತ್ರಿ ಸಂಜನಾ, ಸಹಾಯಕ ವಾರ್ತಾ ಸಂಪರ್ಕ ಮಂತ್ರಿ ಶ್ರೀರಕ್ಷಾ, ಸಹಾಯಕ ಕ್ರೀಡಾ ಮಂತ್ರಿ ಸಂದೀಪ, ಸಹಾಯಕ ಸ್ವಚ್ಛತಾ ಮಂತ್ರಿ ಶ್ರೇಯಸ್ ಆಚಾರ್ಯ,ಸಹಾಯಕ ಆಹಾರ ಮಂತ್ರಿ ಸಮರ್ಥ ಪ್ರಮಾಣವಚನ ಸ್ವೀಕರಿಸಿದರು. ವಿದ್ಯಾರ್ಥಿನಿಯರಾದ ಶ್ರೀನಿಧಿ, ಅನನ್ಯ ಮತ್ತು ತನ್ವಿ ಕಾರ್ಯಕ್ರಮ ನಿರೂಪಿಸಿದರು.




