


ಶ್ರೀನಿವಾಸಪುರ: ಪಟ್ಟಣದ ಕ್ರೀಡಾಂಗಣದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸುವಂತೆ ಹಾಗೂ ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುವಂತೆ ಆಗ್ರಹಿಸಿ, ತಾಲ್ಲೂಕು ಕಾಂಗ್ರೆಸ್ ಮುಖಂಡರು ತಹಶೀಲ್ದಾರ್ ಜಿಎನ್.ಸುಧೀಂದ್ರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ. ಪ್ರಕಾಶ್ ಮಾತನಾಡಿ, ಮುಖ್ಯ ಮಂತ್ರಿಗಳ ವಿವೇಚನಾ ನಿಧಿಯಡಿ ರೂ.5 ಕೋಟಿ ಮಂಜೂರಾಗಿದ್ದು, ಆ ಧನದಲ್ಲಿ ಕ್ರೀಡಾಂಗಣದಲ್ಲಿ ರೂ.3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸಲು ಪುರಸಭೆ ಅನುಮೋದನೆ ನೀಡಿದೆ ಆದರೆ ಈವರೆಗೆ ಅದರ ಅನುಷ್ಠಾನ ಸಾಧ್ಯವಾಗಿಲ್ಲ ಎಂದು ಹೇಳಿದರು.
ಪಟ್ಟಣದಲ್ಲಿ ಸುಸ್ಥಿತಿಯಲ್ಲಿದ್ದ ಕೆಲವು ರಸ್ತೆಗಳನ್ನು ಕಿತ್ತು ಮರು ನಿರ್ಮಾಣ ಮಾಡಲಾಗುತ್ತಿದೆ. ಆದರೆ ರಸ್ತೆ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿರುವವರಲ್ಲಿ ನಿರ್ಮಾಣಕ್ಕೆ ಅಗತ್ಯವಾದ ಇಂಜಿನಿಯರ್ಗಳಾಗಲಿ, ಸೌಕರ್ಯವಾಗಲಿ ಇಲ್ಲ ಎಂದು ಆಪಾದಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ಭಾಸ್ಕರ್ ಮಾತನಾಡಿ, ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆಳ್ಳೊಲು ವಿಶೇಷ ಅನುದಾನದಡಿ ರೂ. ಕೋಟಿ ಮಂಜೂರು ಮಾಡಿದೆ. ಆದರೆ ಪೂರ್ವ ನಿರ್ಧಾರದಂತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿಲ್ಲ. ಮುಖ್ಯವಾಗಿ ಈಜುಕೊಳ ನಿರ್ಮಾಣ ಕಾಮಗಾರಿಯನ್ನು ನಿರ್ಲಕ್ಷಿಸಲಾಗಿದೆ. ಈಗ ಈಜು ಮಕ್ಕಳ ದೈಹಿಕ ಆರೋಗ್ಯ ಸುಧಾರಣೆ ಹಾಗೂ ಜೀವ ರಕ್ಷಣೆಗೆ ಅತ್ಯಗತ್ಯವಾಗಿದೆ. ಪಟ್ಟಣದ ಪೋಷಕರು ತಮ್ಮ ಮಕ್ಕಳನ್ನು ಹೊರಗಿನ ತಾಲ್ಲೂಕು ಕೇಂದ್ರಗಳಿಗೆ ಕರೆದೊಯ್ದ ಈಜು ತರ¨ ಕೊಡಿಸುತ್ತಿದ್ದಾರೆ. ಇದು ವೆಚ್ಚದಾಯಕವಾಗಿದೆ. ಆದ್ದರಿಂದ ಪಟ್ಟಣದ ಎಲ್ಲ ನಾಗರಿಕರಿಗೂ ಅನುಕೂಲವಾಗುವಂತೆ ಈಜುಕೊಳ ನಿರ್ಮಾಣ ಕಾಮಗರಿಯನ್ನು ಕೈಗೆತ್ತಿಕೊಳ್ಳಲು ಒತ್ತಾಯಿಸಿದರು.
ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ ಮಾತನಾಡಿ, ಪಟ್ಟಣದ ಕ್ರೀಡಾಂಗಣದಲ್ಲಿ ಈಜುಕೊಳ ನಿರ್ಮಿಸುವ ಸಲುವಾಗಿ ಸಂಬAಧಪಟ್ಟ ಅಧಿಕಾರಿಗಳಿಗೆ ಹಲವು ಸಲ ಮನವರಿಕೆ ಮಾಡಿಕೊಟ್ಟರೂ, ಪ್ರಯೋಜನವಾಗುತ್ತಿಲ್ಲ. ಆ ಕುರಿತು ಈಗ ಮತ್ತೊಮ್ಮೆ ಮನವಿ ಮಾಡಲಾಗಿದೆ. ನಿಗದಿತ ಅವಧಿಯೊಳಗೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸದಿದ್ದರೆ, ನಾಗರಿಕರ ಪರವಾಗಿ ಪ್ರತಿಭಟನೆ ನಡೆಸಲಾಗುವುದು. ತಾಲ್ಲೂಕು ಬಂದ್ಗೆ ಕರೆ ನೀಡಲಾಗುವುದು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಕೆಪಿಸಿಸಿ ಸದಸ್ಯ ಸಂಜಯ್ರೆಡ್ಡಿ, ಆರ್ಎಂಸಿ ವೇಣುಗೋಪಾಲ್, ಸದಸ್ಯರಾದ ಮುನಿರಾಜು, ಎನ್.ಎನ್.ಕೆ.ನಾಗರಾಜು, ಹೆಮಂತ್ ಕುಮಾರ್, ಶಿವರಾಜ್. ನರಸಿಂಹ ಮೂತಿ, ಗಂಗಾಧರ್, ಮುಖಂಡರಾದ ಹರೀಶ್ ಯಾದವ್, ಸೊಮನಾಥ್, ಅಪ್ಪೂರು ವೆಂಕಟೇಶ್, ª್ರÀ,ಂಜು,Áª, ª್ರÀಂಜು,Á ಡಾ.ಸುಧಾಕರ್, ತಾಲ್ಲೂಕು ಭೂ ಮಂಜೂರಾತಿ ಸಮಿತಿ ಸದಸ್ಯ ಸೀತಾರಾಮರೆಡ್ಡಿ , ಮಂಜುನಾಥರೆಡ್ಡಿ ಇದ್ದರು.


