


ಕುಂದಾಪುರ :ಗಂಗೊಳ್ಳಿಯ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಸಂಸತ್ತಿನ ಚುನಾವಣೆಯನ್ನು ಮೊಬೈಲ್ ನಲ್ಲಿ ಈವಿಎಂ ಮೂಲಕ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಇಬ್ರಾಹಿಂ ಚೌಗಲೆಯವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮುಖ್ಯಸ್ಥರಾದ ಅಮ್ಜದ್ ಅಲಿ ಇಬ್ರಾಹಿಂ ಶೇಖ್ ಅವರು ಶಾಲಾ ಸಂಸತ್ತಿನ ಮಹತ್ವ ಮತ್ತು ನಾಯಕತ್ವದ ಗುಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದರ ಮೂಲಕ ಶುಭ ಹಾರೈಸಿದರು. ಶಾಲೆಯ ಸಹಾಯಕ ಮುಖ್ಯೋಪಾಧ್ಯಾಯರಾದ ಝುಲೇಖ ಮುಲ್ಲಾ ಮತ್ತು ಮ್ಯಾನೇಜರ್ ಆದ ತಾಹಿರ್ ಹಸನ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಭ್ಯರ್ಥಿಗಳು ತಮ್ಮ ಚಿಹ್ನೆಯನ್ನು ತೋರಿಸುವುದರ ಮೂಲಕ ಮತಯಾಚಿಸಿದರು. ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸಿದರು. 10ನೇ ತರಗತಿಯ ಮೌಲಾನ ಅತಿಯಾಬ್ ಮತ್ತು ಐಝಾ ಶಾಲಾ ಸಂಸತ್ತಿನ ಎಸ್ ಪಿ ಎಲ್ ಆಗಿ, 9ನೇ ತರಗತಿಯ ಮೊಹಮ್ಮದ್ ಅಲಿಕ್ ಮತ್ತು ರುಯೇಫಾ ಎಎಸ್ ಪಿಎಲ್ ಆಗಿ ಆಯ್ಕೆಗೊಂಡರು. ಶಿಕ್ಷಕಿಯರಾದ ಜಯಂತಿ ಸ್ವಾಗತ, ಪ್ರಮೀಳಾ ನಿರೂಪಣೆಗೈದರು.

