

ಪಡುಕೋಣೆ : ದಿನಾಂಕ 19.6.2026 ರಂದು ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ಸೀನಿಯರ್ ಸಿಟಿಜನ್ ಸ಼ಂಘದ ಸದ್ಯಸರಿಂದ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಹದ ಸದಸ್ಯರು ಚರ್ಚಿನ ಧರ್ಮಗುರು ವಂ। ಪ್ರಾನ್ಸಿಸ್ ಕರ್ನೆಲಿಯೊರವರು ರಚಿಸಿದ 5 ಪ್ರಾರ್ಥನೆ ಗೀತೆಗಳಲ್ಲಿ ಯಾವುದಾದರು ಒಂದನ್ನು ಹಾಡುವ ಸ್ಫರ್ಧೆ ಆಯೋಜಿಸಲಾಗಿತ್ತು. ಈ ಸ್ಫರ್ಧೆಯಲ್ಲಿ ಹೆಚ್ಚಿನವರು ಭಾಗವಹಿಸಿದರು. ಧರ್ಮಗುರುಗಳು ಬೈಬಲ್ ಕ್ವಿಜ್ ನ್ನು ನಡೆಸಿದರು, ಉತ್ತಮ ರೀತಿಯಲ್ಲಿ ಉತ್ತರಿಸಿದವರಿಗೆ ಹಾಗೂ ಪ್ರಾರ್ಥನೆ ಗೀತೆ ಹಾಡಿದವರಿಗೂ ಬಹುಮಾನವನ್ನು ನೀಡಲಾಯಿತು. ಹಿಂದಿನ ಸಭೆಯಲ್ಲಿ ಸಪ್ಟೆಂಬರ್ ನಿಂದ ಡಿಸೆಂಬರ್ ತನಕ ಜನಿಸಿದ ಹಿರಿಯ ಸದಸ್ಯರಿಗೆ ಧರ್ಮಗುರುಗಳು ಪುಷ್ಪವನ್ನು ನೀಡಿ ಗೌರವಿಸಿದ್ದು, ಈ ಸಂದರ್ಭದಲ್ಲಿ ಜನವರಿಯಿಂದ ಜೂನ್ ತನಕ ಜನಿಸಿದ ಹಿರಿಯ ಸದಸ್ಯರಿಗೆ ಅವರು ಹುಟ್ಟಿದ ದಿನಾಂಕ ಮತ್ತು ತಿಂಗಳನ್ನು ನೆನಪಿಸಿ ಪುಷ್ಪವನ್ನು ನೀಡಿ ಗೌರವಿಸಲಾಯಿತು.
ಜೊತೆಗೆ 21.6. 2026 ರಂದು ಜನಿಸಿದ ಫಾದರ್ ಪ್ರಾನ್ಸಿಸ್ ಕರ್ನೆಲಿಯೊರವರಿಗೆ ಸದಸ್ಯರೆಲ್ಲರೂ ಸೇರಿ ಅವರ ಹುಟ್ಟು ಹಬ್ಬವನ್ನು ಆಚರಿಸಿದರು. ಕೇಕ್ ಕತ್ತರಿಸಿ ಶುಭಾಶಯ ಗೀತೆಯೊಂದಿಗೆ ಸಾಲಾಗಿ ಬಂದು ಪುಷ್ಪಾವನ್ನು ನೀಡಿ ಶುಭಾಶಯವನ್ನು ಕೋರಿದರು. ಸೀನಿಯರ್ ಸಿಟಿಜನ್ ಸಂಘದ ಅಧ್ಯಕ್ಷರಾದ ಡೊಲ್ಫಿ ಡಿಸಿಲ್ವಾರವರು ಸ್ವಾಗತಿಸಿದರು. ಟ್ರಿಜಾ ಸಿಕ್ವೇರಾರವರು ಧನ್ಯವಾದ, ಸಂಘದ ಕಾರ್ಯದರ್ಶಿ ಡೇರಿ ರೆಬೆಲ್ಲೊ ಕಾರ್ಯಕ್ರಮ ನಿರ್ವಾಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಲಘು ಉಪಹಾರದ ಪ್ರಾಯೋಜಕರಾಗಿ ಸಿಲ್ವೆಸ್ಟರ್ ಬುತ್ತೆಲ್ಲೊ ಹಾಜರಿದ್ದರು.


























