

ಗಂಡಿಬಾಗಿಲಿನ ಸಿಯೋನ್ ಆಶ್ರಮ ಟ್ರಸ್ಟ್ (ರಿ.)ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 21-06-2026 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಮತಿ ಓಮನಾ ಹಾಗೂ ಅತಿಥಿ ಗಣ್ಯರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಯು.ಸಿ. ಪೌಲೋಸ್ ಹಾಗೂ ಟ್ರಸ್ಟಿ ಸದಸ್ಯೆ ಶ್ರೀಮತಿ ಮೇರಿ ಯು.ಪಿ. ಅವರ ನೇತೃತ್ವದಲ್ಲಿ ಆಶ್ರಮದ ನಿವಾಸಿಗಳು, ಸಿಬ್ಬಂದಿ ವರ್ಗದವರು ಹಾಗೂ ಉಪಸ್ಥಿತರಿದ್ದ ಗಣ್ಯರಿಗೆ ವಿವಿಧ ಯೋಗಾಸನಗಳನ್ನು ಮಾಡಿಸುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವೈದ್ಯರಾದ ಡಾ. ಶಿವಾನಂದ ಸ್ವಾಮಿ ಅವರು ಯೋಗದ ಮಹತ್ವದ ಕುರಿತು ಮಾತನಾಡಿ, ಯೋಗವು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸುವ ಪ್ರಾಚೀನ ಭಾರತೀಯ ಶಿಸ್ತು ಆಗಿದ್ದು, ಒತ್ತಡವನ್ನು ನಿಯಂತ್ರಿಸಲು, ಮನಸ್ಸಿಗೆ ಶಾಂತಿಯನ್ನು ನೀಡಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಓಮನಾ (ಸಬ್ ಇನ್ಸ್ಪೆಕ್ಟರ್, ವೇಣೂರು ಪೊಲೀಸ್ ಠಾಣೆ), ಸಂಸ್ಥೆಯ ವೈದ್ಯಾಧಿಕಾರಿ ಡಾ. ಶಿವಾನಂದ ಸ್ವಾಮಿ, ಹಿತೈಷಿಗಳಾದ ಶ್ರೀ ಶಾಜಿ (ವಯನಾಡು), ಶ್ರೀ ಜೋಸೆಫ್ ಪಿ.ಪಿ., ಶ್ರೀ ದೇವಸ್ಯ ಎಂ.ಪಿ., ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಆಶ್ರಮನಿವಾಸಿಗಳು ಉಪಸ್ಥಿತರಿದ್ದರು.






