Music festival in aid of Snehalaya Charitable Trust’s projects


ಸ್ನೇಹಾಲಯ ಚ್ಯಾರಿಟೇಬಲ್ ಟ್ರಸ್ಟ್ (ನೊಂ)ಬಾಚಳಿಕೆ, ಪಾವೂರು, ಮಂಜೆಶ್ವರ, ಕಾಸರಗೋಡ್ ಸಂಸ್ಥೆಯು 2009 ರಿಂದ ಮಾನಸಿಕ ಅಸ್ವಸ್ಥರ ರಕ್ಷಣೆ, ಶೂಶ್ರುಷೆ, ಔಷೋದೊಪಚಾರ ಆರೋಗ್ಯ, ಪುನರ್ವಸತಿ ಒದಗಿಸುವ ನಿರಂತರ ಸೇವೆ ನೀಡುತ್ತಾ 17 ವರುಷಗಳಲ್ಲಿ 1750ಕ್ಕೂ ಮಿಗಿಲಾಗಿ ರಕ್ಷಿಸಲ್ಪಟ್ಟ ನಿವಾಸಿಗಳನ್ನು ಗುಣಪಡಿಸಿ ಅವರಿಗೆ ತಮ್ಮ ಕುಟುಂಬಗಳಲ್ಲಿ ಪುನರ್ಮಿಲನಗೊಳಿಸಿ, ಪುನರ್ವಸತಿ ಕಲ್ಪಿಸಿ, ಜನಮೆಚ್ಚುಗೆ ಪಡೆದ ಮಂಗಳೂರು- ಕಾಸರಕೋಡು ಜಿಲ್ಲೆಗಳ ಪರಿಸರದಲ್ಲಿ ಜನಪ್ರಿಯ ಸಂಸ್ಥೆಯಾಗಿದೆ
ಈ ಸಂಸ್ಥೆಯು ಹತ್ತು ಹಲವು ಯೋಜನೆಗಳ ಅನುಷ್ಠಾನ, ಪ್ರಸ್ತುತ ದಾಖಲಿರುವ 375 ನಿವಾಸಿಗಳ ಅಗತ್ಯತೆಗಳು, ಮನೋರೋಗ ಚಿಕಿತ್ಸೆ ಡಿ ಎ ಡಿಕ್ಷನ್ ಹಾಗೂ ವಿಶೇಷ ಅಗತ್ಯವುಳ್ಳ ಕುಟುಂಬ ಸದಸ್ಯರ ಶಿಕ್ಷಣ ಹಾಗೂ ಇತರ ಯೋಜನೆಗಳ ಸಹಾಯಾರ್ಥ ಸಂಗೀತ ರಸಮಂಜರಿ ಕಾರ್ಯಕ್ರಮ ಒಂದನ್ನು ಇದೇ ಭಾನುವಾರ 21-6-2026ರಂದು ಮಂಗಳೂರಿನ ಟಾನ್ ಹಾಲ್ ನಲ್ಲಿ ಸಂಜೆ 6.00 ಘಂಟೆಗೆ ಆಯೋಜಿಸಲಾಗಿದೆ
ಪ್ರಖ್ಯಾತ ಸಂಗೀತಗಾರರಾಗಿದ್ದು ಖ್ಯಾತ ಉದ್ಯಮಿಯೂ ಆಗಿರುವ ಕೆವಿನ್ ಮಿಸ್ಕಿತ್, ಈ ಕಾರ್ಯಕ್ರಮದ ರೂವಾರಿ. ಇವರು ಖ್ಯಾತ ಗೀತರಚನೆಕಾರ, ಸಂಗೀತ ಸಂಯೋಜಕ ಹಾಗೂ ಗಾಯಕರಾಗಿದ್ದು, ಆರು ಸಂಗೀತ ಆಲ್ಬಮ್ಗಳನ್ನು ನಿರ್ಮಿಸಿದ್ದಾರೆ ಮತ್ತು ವಿಶ್ವದಾದ್ಯಂತ 53ಕ್ಕೂ ಹೆಚ್ಚು ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್ಡಮ್, ಐರ್ಲೆಂಡ್, ಒಮಾನ್, ಬಹ್ರೈನ್ ಸೇರಿದಂತೆ ಅನೇಕ ದೇಶಗಳ ಪ್ರೇಕ್ಷಕರ ಮನಗೆದ್ದಿದ್ದಾರೆ.
ಏಳು ವರ್ಷಗಳ ದೀರ್ಘ ವಿರಾಮದ ಬಳಿಕ, ಅವರು ಅದ್ಧೂರಿ ಪುನರಾಗಮನ ಸಂಗೀತ ರಸಮಂಜರಿಯೊಂದಿಗೆ ಮತ್ತೆ ವೇದಿಕೆಗೆ ಮರಳುತ್ತಿದ್ದಾರೆ! ಈ ಮನೋರಂಜನ ಕಾರ್ಯಕ್ರಮದ ಎಲ್ಲಾ ಧನಸಹಾಯ ಒಟ್ಟುಗೊಡಿಸುವಿಕೆ
ಸ್ನೇಹಾಲಯದ ಮಾನವೀಯ ಸೇವಾ ಕಾರ್ಯಗಳಿಗೆ ಒಪ್ಪಿಸಲಾಗುವುದು.
ಸದರಿ, ಅಯೋಜಿಸಿದ ಸಂಗೀತ ಸಂಭ್ರಮ ಕ್ಕೆ ಪ್ರಚಾರ ನೀಡಿ ಸ್ನೇಹಾಲಯಕ್ಕೆ ತಮ್ಮ ಬೆಂಬಲ ಸಹಾಯ ನೀಡುವರೇ ಅಯೋಜಕರು ವಿನಂತಿಸಿರುತ್ತಾರೆ.
ಪತ್ರಿಕಾ ಪ್ರಕಟಣೆ ನೀಡಿದವರು: ಜೋಸೆಫ್ ಕ್ರಾಸ್ತಾ, ಮ್ಯಾನೇಜಿಂಗ್ ಟ್ರಸ್ಟಿ. ಸ್ಣೇಹಾಲಯ.
Music festival in aid of Snehalaya Charitable Trust’s projects
Snehalaya Charitable Trust (Nom) Bachalike, Pavur, Manjeshwara, Kasaragod has been providing continuous services of protection, nursing, medical treatment, health, rehabilitation of mentally ill people since 2009. In 17 years, more than 1750 rescued residents have been cured, reunited with their families, rehabilitated and have become a popular organization in the environment of Mangalore-Kasargod districts.
This organization is implementing many projects, meeting the needs of 375 residents currently registered, psychiatric treatment, D.A. diction and education of special needs family members and other projects. A music festival program has been organized on this Sunday, 21-6-2026 at 6.00 pm at Ton Hall, Mangalore.
Kevin, who is a famous musician and a famous businessman Miskit, the mastermind behind this show. He is a renowned songwriter, music composer and singer who has produced six music albums and conducted more than 53 music festivals around the world. He has captivated audiences in many countries including the US, Canada, the United Kingdom, Ireland, Oman, Bahrain.
After a long break of seven years, he is returning to the stage with a grand comeback music festival! All the funds raised from this entertainment show will be donated to Snehalaya’s humanitarian work.
The organizers request that you support Snehalaya by promoting the music festival.
Press Release: Joseph Crasta, Managing Trustee. Snehalaya.

