

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕುಂದಾಪುರ ತಾಲೂಕು ಘಟಕದಿಂದ 20ನೇ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 28 ರಂದು ನಡೆಸಲು ನಿರ್ಧರಿಸಲಾಗಿದೆ.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಉಮೇಶ್ ಪುತ್ರನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಂಭಾಸಿ ಗ್ರಾಮದ ಆನೆಗುಡ್ಡೆಯಲ್ಲಿ ಶ್ರೀ ವಿನಾಯಕ ಸಭಾಗೃಹದಲ್ಲಿ ಸಮ್ಮೇಳನ ಏರ್ಪಡಿಸಲು ನಿರ್ಣಯಿಸಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ, ಸಮ್ಮೇಳನದ ಹೆಸರು, ಸಮ್ಮೇಳನದಲ್ಲಿ ನಡೆಸಬಹುದಾದ ವಿವಿಧ ಕಾರ್ಯಕ್ರಮಗಳು, ಅತಿಥಿಗಳ ಆಯ್ಕೆ, ಸಾಧಕರ ಆಯ್ಕೆ, ಆಹ್ವಾನ ಪತ್ರ ಸಿದ್ಧತೆ ಮುಂತಾದ ವಿಚಾರಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು.
ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಸಭೆಯಲ್ಲಿ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ನರೇಂದ್ರ ಕುಮಾರ್ ಕೋಟ, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ಧತೆ ಕುರಿತು ಮಾಹಿತಿ ನೀಡಿದರು.
ಹಿರಿಯ ವಿದ್ಯುತ್ ಗುತ್ತಿಗೆದಾರರಾದ ಕೆ. ಆರ್. ನಾಯ್ಕ್, ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ಹಿರಿಯ ಸಾಮಾಜಿಕ ಧುರೀಣ ಕೊರ್ಗಿ ವಿಠಲ ಶೆಟ್ಟಿ, ಕೆ. ಗೋಪಾಲಕೃಷ್ಣ ಶೆಟ್ಟಿ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ನಿವೃತ್ತ ಎಲ್ಐಸಿ ಅಧಿಕಾರಿ ರವಿರಾಜ ಕುಂಭಾಸಿ, ಡಾ| ಚೇತನ ಶೆಟ್ಟಿ ಕೊವಾಡಿ, ರವಿರಾಜ ಉಪಾಧ್ಯಾಯ, ರಾಧಾದಾಸ್ ಕುಂಭಾಸಿ, ಬಾಬಣ್ಣ ಪೂಜಾರಿ ಬೀಜಾಡಿ, ರಂಜಿತ್ ಕುಮಾರ್ ಶೆಟ್ಟಿ, ಪ್ರವೀಣ ಮೊಗವೀರ ಗಂಗೊಳ್ಳಿ, ಸುಪ್ರಿತಾ ಪುರಾಣಿಕ್, ಸುಬ್ಬಣ್ಣ, ಪ್ರಭಾಕರ ಕುಂಭಾಸಿ, ಚಂದ್ರಶೇಖರ ಬೀಜಾಡಿ, ಚಂದ್ರಶೇಖರ ಶೆಟ್ಟಿ, ರಮಾನಂದ ಕುಂದಾಪುರ, ಕಲ್ಪನಾ ಭಾಸ್ಕರ್ ಮುಂತಾದವರು ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದರು.
ಕುಂದಾಪುರ ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ ಸ್ವಾಗತಿಸಿದರು. ಖಜಾಂಚಿ ಕೆ. ಎಸ್. ಮಂಜುನಾಥ್ ಸಭಾ ನಿರ್ಣಯಗಳನ್ನು ಮಂಡಿಸಿದರು. ಅಕ್ಷತಾ ಗಿರೀಶ್ ವಂದಿಸಿದರು.

