

ಕುಂದಾಪುರ ಸ್ಥಳೀಯ ಮನೆಯೊ೦ದರಲ್ಲಿ ಕಳ್ಳರು ನುಗ್ಗಿ ನಗದು ಕಳವು ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ಹಾಗೂ ವಿನಯ್ ಆಸ್ಪತ್ರೆಯ ಪಕ್ಕ ಮೋಟಾರು ಸೈಕಲ್ ಕಳವು ಮಾಡಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬ೦ಧಿಸುವಲ್ಲಿ ಕ೦ದಾಯ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಯನ್ನುಮೂಲತಹ ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಸಾವರ್ ಕು೦ಡ್ಲದ ಆರೋಪಿಯನ್ನು ಉತ್ತರಕನ್ನಡ ಜಿಲ್ಲೆಯ ಮುರಡೇಶ್ವರದಲ್ಲಿ ನೆಲೆಸಿರುವ ಮಾಹಿತಿಯ ಮೇರೆಗೆ ಆರೋಪಿಯನ್ನು ಮುರಡೇಶ್ವರದಲ್ಲಿ ವಶಕ್ಕೆ ಪಡೆದುಕೂ೦ಡಿದ್ದಾರೆ.
ಕು೦ದಾಪುರ ಪಟ್ಟಣದ ಸ೦ಗಮ್ ಜ೦ಕ್ಷನ್ ಹತ್ತಿರ ವಿರುವ ಜೆ ಎಮ್ ಜೆ ವಿಲ್ಲಾ ಎ೦ಬ ಹೆಸರಿನ
ಪಿರ್ಯಾದಿದಾರರ ಮನೆಯಲ್ಲಿ ಮನೆಯ ಎದುರಿನ ಬಾಗಿಲಿನ ಚೀಲಕವನ್ನು ಮುರಿದು ಮನೆಯ ಒಳಗೆ
ಪ್ರವೇಶಿಸಿ ಮನೆಯಲ್ಲಿದ್ದ ಕಪಾಟಿನ ಬೀಗ ತೆಗೆದು ಕಪಾಟಿನಲ್ಲಿಟ್ಟಿದ್ದ ರೂಪಾಯಿ 10000/- ನಗದನ್ನು ಯಾರೋ
ಕಳ್ಳರು ಕಳವು ಮಾಡಿಕೊ೦ಡು ಹೋಗಿರುತ್ತಾರೆ, ದೂರು ದಾಖಲಾಗಿದ್ದುಈ ಪ್ರಕರಣದ ತನಿಖೆಯ ಸ೦ಬ೦ಧ ಹೆಚ್ ಡಿ ಕುಲಕರ್ಣಿ, ಪೋಲೀಸ್ ಉಪಾಧೀಕ್ಷಕರು ಕು೦ದಾಪುರ ಹಾಗೂ ಕುಂದಾಫುರ ಪೊಲೀಸ್ ಠಾಣಾ ನಿರೀಕ್ಷಕರಾದ ಜಯರಾಮ್ ಡಿ ಗೌಡರವರ ನಿರ್ದೇಶನದಂತೆ ಠಾಣಾ ಪಿ.ಎಸ್.ಐ ರವರಾದ ನ೦ಜಾನಾಯ್ಕ್, ಪಿ.ಎಸ್.ಐ ಶ್ರೀಮತಿ ಪುಷ್ಪ (ತನಿಖೆ, ಹಾಗೂ ಸಿಬ್ಬಂದಿಗಳಾದ ಮೋಹನ ಹೆಚ್ಸಿ, ಸ೦ತೋಷ ಹೆಚ್ಸಿ, ಪ್ರೀನ್ಸ್, ಮಹಾಬಲ ಶೆಟ್ನಿಗಾರ ಹೆಚ್ಸಿ, ಸಂತೋಷ ದೇವಾಡಿಗ ಪಿಸಿ, ಘನಶ್ಯಾಮ್ ಪಿಸಿ ರವರ ತಂಡದ ಕಾರ್ಯಚರಣೆಯಲ್ಲಿ, ಆರೋಪಿಯ ಪತ್ತೆಯ ಬಗ್ಗೆ ಆತನ ವಿಳಾಸವಾದ ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಸಾವರ್ ಕು೦ಡ್ಲ ಎ೦ಬಗ್ಲಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿದಲ್ಲಿ ಆತನು
ಉತ್ತರಕನ್ನಡ ಜಿಲ್ಲೆಯ ಮುರಡೇಶ್ವರದಲ್ಲಿ ಇರುವ ಮಾಹಿತಿಯ ಮೇರೆಗೆ ಮುರಡೇಶ್ಚರದಲ್ಲಿ ವಶಕ್ಕೆ ಪಡೆದು
ವಿಚಾರಣೆ ಮಾಡಿದ ಸಮಯ ಕುಂದಾಪುರದಲ್ಲಿ ಮನೆ ಹಾಗೂ ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾನೆ.
ಇತನಿಂದ ಕಳುವು ಮಾಡಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

