

ದಿನಾಂಕ : 10-06-2026: ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಚಿವ ಸಂಪುಟದ ಉದ್ಘಾಟನಾ ಸಮಾರಂಭವು ಅತ್ಯಂತ ಸಂಭ್ರಮ ಹಾಗೂ ಗೌರವದಿಂದ ನಡೆಯಿತು. ಶಾಲಾ ವಾದ್ಯ ತಂಡದೊಂದಿಗೆ ಶಾಲಾ ಮಂತ್ರಿ ಮಂಡಲದ ಸದಸ್ಯರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಭಿಸಲಾಯಿತು. ಹೊಸದಾಗಿ ಆಯ್ಕೆಯಾದ ಶಾಲಾ ಸಚಿವ ಸಂಪುಟದ ಸದಸ್ಯರು ತಮ್ಮನ್ನು ಪರಿಚಯಿಸಿಕೊಂಡರು. ನಂತರ ಶಾಲಾ ಸಂಚಾಲಕರಾದ ರೆ. ಫಾ. ರಿತೇಶ್ ರೊಡ್ರಿಗಸ್, ಮುಖ್ಯ ಶಿಕ್ಷಕಿ ಶ್ರೀಮತಿ ಮೆಟಿಲ್ಡಾ ಡಿ ಕೋಸ್ತ, ಶಿಕ್ಷಕಿ ಲಿಲ್ಲಿ ಮೊಂತೇರೋ ಹಾಗೂ ಶಾಲಾ ನಾಯಕ ಮಾಸ್ಟರ್ ಮಾಕ್ವಿನ್ ಹಾಗೂ ಉಪನಾಯಕ ಭುವನ್ ರವರು ದೀಪ ಬೆಳಗಿಸುವ ಮೂಲಕ ಸಾಂಕೇತಿಕ ಉದ್ಘಾಟನೆಯನ್ನುಮಾಡಿದರು. ಸಚಿವ ಸಂಪುಟದ ಸದಸ್ಯರು ಶಾಲಾ ನಾಯಕನ ನೇತೃತ್ವದಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿದರು. ತದನಂತರ ಹೊಸದಾಗಿ ಆಯ್ಕೆಯಾದ ನಾಯಕರಿಗೆ ಬ್ಯಾಡ್ಜ್ ಹಾಗೂ ಸ್ಯಾಶ್ ಗಳನ್ನು ವಿತರಿಸಲಾಯಿತು. ಶಾಲಾ ಸಂಚಾಲಕರು ಮಂತ್ರಿ ಮಂಡಲದ ಎಲ್ಲಾ ಸದಸ್ಯರಿಗೆ ಶುಭವನ್ನು ಕೋರುತ್ತಾ, ಶಾಲಾ ನಾಯಕರುಗಳಾಗಿ ಯಾವ ರೀತಿ ಶಾಲಾ ಶಿಸ್ತನ್ನು ಕಾಪಾಡಬೇಕು, ಆಲಿಸುವ ಗುಣವನ್ನು ಬೆಳೆಸಿ, ಯಾವ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು 10ನೇ ತರಗತಿಯ ವಿದ್ಯಾರ್ಥಿ ಕುಮಾರಿ ಸಾಕ್ಷಿ ನೆರವೇರಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ವಿನಿಶಾ ಸ್ವಾಗತಿಸಿ, ಕುಮಾರಿ ಶಾರದಾ ವಂದನಾರ್ಪಣೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ನೂತನವಾಗಿ ಆಯ್ಕೆಯಾ ಶಾಲಾ ಸಂಪುಟದ ಶಾಲಾ ನಾಯಕ ಮಾಸ್ಟರ್ ಮಾಕ್ವಿನ್ ಹಾಗೂ ಉಪನಾಯಕ ಮಾಸ್ಟರ್ ಭುವನ್ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿಯನ್ನು ವಿತರಿಸಿದರು.





