

ದಿನಾಂಕ 5.6.2026 ಕುಂದಾಪುರ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೀಡುವುದರ ಮೂಲಕ ಆಚರಿಸಲಾಯಿತು ಸಿಎಸ್ಸಿ ಕೃಪಾ ಚರ್ಚಿನ ಧರ್ಮಗುರುಗಳಾದ ಇಮಾನ್ಯುವೆಲ್ ಜೈಕರ್ ರವರು ಅತಿಥಿಗಳಾಗಿ ಆಗಮಿಸಿ ಪರಿಸರವನ್ನು ರಕ್ಷಿಸುವುದರಿಂದ ಇಡೀ ಮಾನವ ಸಂಕುಲದ ಉನ್ನತೀಕರಣ ಸಾಧ್ಯ ಎಂದು ತಿಳಿಸಿದರು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ರವರು ವಿದ್ಯಾರ್ಥಿಗಳಿಗೆ ಜೀವನದ ವಿಶೇಷಕ್ಷಣಗಳನ್ನು ಗಿಡ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ಎಂದು ತಮ್ಮ ಸ್ವಾಗತ ಭಾಷಣದಲ್ಲಿ ತಿಳಿಸಿಕೊಟ್ಟರು. ಅಂತೆಯೇ ಸಿ ಎಸ್ ಐ ಕೃಪಾ ನರ್ಸರಿ ಶಾಲೆಯ ಮುಖ್ಯೋಪಾಧ್ಯಾಯಣಿ ಶ್ರೀಮತಿ ಸವಿತಾ ರವರು ಪರಿಸರದ ನಾಶ ಮಾನವ ಕುಲದ ಅವನತಿಗೆ ಪಯಣ ಎನ್ನುವುದನ್ನು ಮಕ್ಕಳಿಗೆ ಅರ್ಥೈಸಿ ಪರಿಸರದ ಬಗ್ಗೆ ಕಾಳಜಿಯನ್ನು ಮೂಡಿಸಿದರು. ಶಿಕ್ಷಕಿ ಶ್ರೀಮತಿ ಲತಾ ಸಾಲಿನ್ಸರವರು ಮಕ್ಕಳಿಗೆ ಗಿಡಗಳನ್ನು ಹಂಚುವುದರ ಮೂಲಕ ಪರಿಸರ ದಿನಾಚರಣೆಯ ಶುಭಾಶಯ ಕೋರಿದರು. ಮಕ್ಕಳೆಲ್ಲರೂ ಪರಿಸರ ದಿನಾಚರಣೆಯ ಚಿತ್ರಗಳನ್ನು ಬಿಡಿಸಿ ಅದೇ ರೀತಿಯಲ್ಲಿ ಸ್ಲೋಗನ್ ಗಳನ್ನು ಬಿತ್ತಿ ಪತ್ರದ ಮೇಲೆ ಬರೆದು ತಂದು ಪ್ರದರ್ಶಿಸಿದರು ಈ ಎಲ್ಲಾ ಕಾರ್ಯಕ್ರಮವು ಸಹ ಶಿಕ್ಷಕಿ ಶ್ರೀಮತಿ ಪವಿತ್ರ ಕೊತ್ವಾಲ್ರವರ ನಿರೂಪಣೆಯಲ್ಲಿ ಜರುಗಿತು.
World Environment Day was celebrated at UBMC English Medium School

On 5.6.2026, World Environment Day was celebrated at UBMC English Medium School, Kundapur by distributing saplings. Emmanuel Jaiker Jaikar, the priest of CSC Krupa Church, was the guest of honor and said that protecting the environment can lead to the upliftment of the entire human race. The school principal, Mrs. Anita Alice D’Souza, in her welcome speech, told the students to celebrate the special moments of life meaningfully by planting saplings. Similarly, the headmistress of CSI Krupa Nursery School, Mrs. Savita, made the children understand that the destruction of the environment is a path to the decline of humanity and instilled concern for the environment. The teacher, Mrs. Lata Salins, wished the children a happy Environment Day by distributing saplings. All the children drew pictures of Environment Day and wrote slogans on paper in the same manner. This entire program was narrated by their co-teacher, Mrs. Pavithra Kotwal.





























