

ಕುಂದಾಪುರ; ದಿನಾಂಕ 26 5 2026 ರಂದು ತ್ರಾಸಿಯ ನೈನ್ ಪ್ಲಾನೆಟ್ ರೆಸಾರ್ಟ್ ನಲ್ಲಿ 1987 88ನೇ ಸಾಲಿನ ಆರ್ ಎನ್ ಶೆಟ್ಟಿ ಸಿಪಿಎಡ್ ಕಾಲೇಜ್ ಕೊಕ್ಕರ್ಣೆ ಇಲ್ಲಿ ದೈಹಿಕ ಶಿಕ್ಷಣ ತರಬೇತಿ ಪಡೆದವರ “ಸವಿಸ್ಮಯ” ಎಂಬ ಶೀರ್ಷಿಕೆ ಅಡಿಯಲ್ಲಿ ಸಮಾಗಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ದಿನಕರ ಆರ್ ಶೆಟ್ಟಿ ನಿವೃತ್ತ ಮುಖ್ಯೋಪಾಧ್ಯಾಯರು ನಿವೇದಿತ ಹೈ ಸ್ಕೂಲ್, ಬಸ್ರೂರು, ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ ಇವರು ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಶ್ರೀ ಲಕ್ಷ್ಮಣ ಶೆಟ್ಟಿ ಕಟಗೇರಿ ಉದ್ಯಮಿಗಳು ಇವರು ಶುಭಶಂಷಣೆಗೆದರು. ಶ್ರೀ ಪ್ರಭಾಕರ್ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರು ದಂಡ ತೀರ್ಥ ಕಾಪು ಇವರು ಪ್ರಸ್ತಾವಿಕ ಮಾತುಗಳು ನಾಡಿದರು. ಶ್ರೀ ಉದಯ್ ಕುಮಾರ್ ಶೆಟ್ಟಿ ಉದ್ಯಮಿಗಳು ಮೊಳಹಳ್ಳಿ ಇವರು ದಿಕ್ಸೂಚಿ ಭಾಷಣ ಮಾಡಿದರು. ಶ್ರೀಗುಣಕರಶೆಟ್ಟಿ ಉದ್ಯಮಿಗಳು ಕಟಗೇರಿ ಇವರು ಲಕ್ಕಿ ಡ್ರಾ ತೆಗೆದರು. ಶ್ರೀ ದಿನಾಕರ ಆರ್ ಶೆಟ್ಟಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೂ ಶ್ರೀ ರಾಮ್ ಶೆಟ್ಟಿ ಶಿಕ್ಷಕರು ಇವರು ಉದ್ಘಾಟಕರ ಪರಿಚಯ ಮಾಡಿಸಿದರು. ಶ್ರೀ ರಾಮ್ ಶೆಟ್ಟಿ ಶಿಕ್ಷಕರು ಹಾರಾಡಿ ಇವರ ನಾಟಕ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತದೆ, ಅವರನ್ನು ಕೂಡ ವೇದಿಕೆಯಲ್ಲಿ ಪೇಟ ತೊಡಿಸಿ ಸನ್ಮಾನಿಸಲಾಯಿತು. ಹಾಗೂ ಸಂಘದ ಪೋಷಕರಾದ ಶ್ರೀ ಜಯಪ್ರಕಾಶ್ ಶೆಟ್ಟಿ,ಉದಯಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಇವರನ್ನು ಸನ್ಮಾನಿಸಲಾಯಿತು . ಶ್ರೀ ಕೀರ್ತಿ ಕುಮಾರ್ ಶೆಟ್ಟಿ ಹೇರಿ ಕುದ್ರು ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಶಾಂತಿ ರಾಣಿ ಬರೆಟ್ಟೊ ಇವರು ಸರ್ವರಿಗೂ ಧನ್ಯವಾದಗಳು ಅರ್ಪಿಸಿದರು.


