

ಮಂಗಳೂರು; ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ, ಜೆಪ್ಪು ಇಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ಶಾಲಾ ಬ್ಯಾಂಡಿನೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾ ವಿದ್ಯಾರ್ಥಿಗಳು ಸ್ವಾಗತ ನೃತ್ಯದ ಮೂಲಕ ನೆರೆದಿರುವ ಸರ್ವರನ್ನು ಸ್ವಾಗತಿಸಿದರು.
ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆಯ ನೂತನ ಸಂಚಾಲಕರಾದ ಫಾ| ರೀತೇಶ್ ರೊಡ್ರಿಗಸ್ ಇವರನ್ನು ಶಾಲೆ ಹಾಗೂ ಶಿಕ್ಷಕ – ರಕ್ಷಕ ಸಂಘದ ಪರವಾಗಿ ಸ್ವಾಗತಿಸಲಾಯಿತು. ದೀಪ ಬೆಳಗುವುದರ ಮೂಲಕ ಹೊಸ ಶೈಕ್ಷಣಿಕ ವರ್ಷದ ಕಾರ್ಯಾಚಟುವಟಿಗಳಿಗೆ ಚಾಲನೆ ನೀಡಲಾಯಿತು.
2026 – 27ನೇ ಸಾಲಿನಲ್ಲಿ ಹೊಸದಾಗಿ ನೇಮಕಗೊಂಡ ಬೋಧಕ ಬೋಧಕೇತರ ವರ್ಗದವರನ್ನು ಹಾಗೂ ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಲಾಯಿತು. ಈ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೆಟಿಲ್ಡಾ ಡಿ ಕೋಸ್ತ ನೆರವೇರಿಸಿದರು.ಜೀವನದಲ್ಲಿ ಕಲಿಕೆ, ಪ್ರಾರ್ಥನೆ,ಉಪಕಾರ ಸ್ಮರಣೆ ಯಾವತ್ತೂ ನಮಗೆ ಅವಶ್ಯಕವಾಗಿದೆ. ಉತ್ತಮವಾದದ್ದು ಸಾಧಿಸಬೇಕಾದರೆ ನಾವು ಮನಸ್ಸು ಮಾಡಬೇಕು. ಶಿಕ್ಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದು ಶಾಲಾ ಸಂಚಾಲಕರು ಹಿತನುಡಿಗಳನ್ನಾಡಿದರು.
ಶಿಕ್ಷಕಿಯರಾದ ಶ್ರೀಮತಿ ಸೋನಿಯಾ ಸ್ವಾಗತಿಸಿ, ಶ್ರೀಮತಿ ಲಿಲ್ಲಿ ವಂದಿಸಿದರು ಹಾಗೂ ಶ್ರೀಮತಿ ಶಾಂತಿ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.











