

ಕುಂದಾಪುರ; ದಿನಾಂಕ : 01.06.2026ರಂದು ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾದ್ಯಾಮ ಶಾಲೆಯಲ್ಲಿ 2026-27ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭನ್ನು ವಿದ್ಯಾರ್ಥಿಗಳ ಪ್ರಾರ್ಥನೆಯ ಮೂಲಕ ದೇವರನ್ನು ಸ್ಮರಿಸಿ ಪ್ರಾರಂಭಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾಗಿರುವ ವಂ। ಗುರು ರೊಲ್ವಿನ್ ಫೆರ್ನಾಂಡೀಸ್ ರವರು ಶಾಲಾ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ 2025-26ರಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣಿಕರ್ತರಾದ ವಿಷಯ ಶಿಕ್ಷಕರನ್ನು ಸನ್ಮಾನಿಸಿ, ನಮ್ಮ ಶಾಲೆಗೆ ಸೇರಿರುವ ಹೊಸ ಅಧ್ಯಾಪಕರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು ಹಾಗೂ ಶಾಲಾ ಪ್ರಾಥಮಿಕ ಶಿಕ್ಷಕರು ನೀಡುವ ಸೇವೆಯನ್ನು ಗುರುತಿಸಿ ಗೌರವಿಸಿ, ಶಾಲೆಯಲ್ಲಿ ದಾಖಲಾಗಿರುವ ಹೊಸ ವಿದ್ಯಾರ್ಥಿಗಳು ತಮ್ಮ ಪರಿಚಯವನ್ನು ಮಾಡಿಕೊಳ್ಳಲು ಅನುವು ಮಾಡಿಕೊಟ್ಟು ಅವರನ್ನು ಹುರಿದುಂಬಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಅತೀ ವಂ। ಗುರು ಫೌಲ್ ರೆಗೋರವರು ವಿದ್ಯಾರ್ಥಿಗಳಿಗೆ ಪ್ರಾರ್ಥನೆ, ಶಿಸ್ತು, ಕಠಿಣ ಪರಿಶ್ರಮ ಪಡಬೇಕು. ನಾವು ದೇವರ ಮಕ್ಕಳು, ದೇವರು ನಮ್ಮನ್ನು ಪ್ರೀತಿಸುತ್ತಾರೆ, ಎಲ್ಲರನ್ನೂ ಗೌರವಿಸಿರಿ ಎನ್ನುವ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು. ಪ್ರೌಢಶಾಲಾ ಶೈಕ್ಷಣಿಕ ಸಂಯೋಜಕರಾಗಿರುವ ಸಹ ಶಿಕ್ಷಕ ಪ್ರಶಾಂತ್ ರೆಬೇರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಪ್ರಾಥಮಿಕ ಶೈಕ್ಷಣಿಕ ಸಂಯೋಜಕರಾಗಿರುವ ಸಹ-ಶಿಕ್ಷಕಿ ನೀತಾ ಮೆಂಡೋನ್ಸಾ ಸ್ವಾಗತಿಸಿ, ಸಹ-ಶಿಕ್ಷಕಿ ಎಲಿಟಾ ಡಿಸೋಜಾ ನಿರೂಪಿಸಿ, ಸಹ-ಶಿಕ್ಷಕಿ ಸೆಲಿನ್ ಡಿಸೋಜಾ ವಂದನಾರ್ಪಣೆಯನ್ನು ಸಲ್ಲಿಸಿದರು.

















