

ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು 2025-26ನೇ ಸಾಲಿನ ಸಿಬಿಎಸ್ಇ ದ್ವಿತೀಯ ಪಿಯುಸಿ (Class XII) ಬೋರ್ಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಸಾಧಿಸಿದೆ. ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಶೇ.85 ಮತ್ತು ಅದಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ. 23 ವಿದ್ಯಾರ್ಥಿಗಳು ಶೇ.65 ರಿಂದ 85ರೊಳಗಿನ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಇಶಾನ್ ಪೈ ಅವರು ಶೇ.95.60 ಅಂಕಗಳನ್ನು, ದ್ವಿತೀಯ ಸ್ಥಾನವನ್ನು ಪಡೆದ ನೀಲ್ ತಿಮಯ್ಯ ನಂದ ಕಂಡ್ರತಾಂಡ ಅವರು ಶೇ.87 ಅಂಕಗಳನ್ನು, ತೃತೀಯ ಸ್ಥಾನವನ್ನು ಪಡೆದ ಶೈನಾಡ್ ರೆಬೆಕ್ಕಾ ಫರ್ನಾಂಡಿಸ್ ಅವರು ಶೇ.86.80 ಅಂಕಗಳನ್ನು ಪಡೆದಿದ್ದಾರೆ. ನಾಲ್ಕನೇ ಸ್ಥಾನವನ್ನು ಅಲ್ಮಿರಾ ಶಾರಿ ಫೆರ್ನಾಂಡಿಸ್ ಅವರು ಶೇ.86.60 ಅಂಕಗಳೊಂದಿಗೆ ಹಾಗೂ ಐದನೇ ಸ್ಥಾನವನ್ನು ಜಿಯಾನ್ನಾ ಕ್ಲೇರ್ ಸಲ್ದಾನ್ಹಾ ಅವರು ಶೇ.85.60 ಅಂಕಗಳೊಂದಿಗೆ ಪಡೆದಿದ್ದಾರೆ.
ಇಶಾನ್ ಪೈ ಅವರು ಕಂಪ್ಯೂಟರ್ ಸೈನ್ಸ್ನಲ್ಲಿ ಶೇ.100, ಗಣಿತದಲ್ಲಿ ಶೇ.96, ರಸಾಯನಶಾಸ್ತ್ರದಲ್ಲಿ ಶೇ.95 ಹಾಗೂ ಭೌತಶಾಸ್ತ್ರದಲ್ಲಿ ಶೇ.90 ಅಂಕಗಳನ್ನು ಗಳಿಸಿದ್ದಾರೆ.
ಶೈನಾಡ್ ರೆಬೆಕ್ಕಾ ಫೆರ್ನಾಂಡಿಸ್ ಅವರು ಇಂಗ್ಲಿಷ್ನಲ್ಲಿ ಶೇ.99, ಜೀವಶಾಸ್ತ್ರದಲ್ಲಿ ಶೇ.98 ಹಾಗೂ ರಸಾಯನಶಾಸ್ತ್ರದಲ್ಲಿ ಶೇ.95 ಅಂಕಗಳನ್ನು ಪಡೆದಿದ್ದಾರೆ.
ಚಿನ್ಮಯ್ ಸಚ್ಚಿದಾನಂದ ಅವರು ರಸಾಯನಶಾಸ್ತ್ರದಲ್ಲಿ ಶೇ.95 ಅಂಕಗಳನ್ನು ಪಡೆದಿದ್ದಾರೆ.
ಶಾಲೆಯ ಪ್ರಾಂಶುಪಾಲರಾದ ರೋಹನ್ ಡಿ’ಅಲ್ಲ್ಮೇಡ ಅವರು ಹಾಗೂ ಶಿಕ್ಷಕ ವೃಂದವು ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
St Aloysius Gonzaga scores 100% in CBSE Second PUC Board Exam
Mangaluru; St Aloysius Gonzaga School has secured 100% result in the CBSE Class XII Board Examination 2025-26. Out of 28 students appeared, 5 students secured 85% (Distinction) & above, 23 students secured 65 to 85% (First Class) & above.
The First Topper is Ishaan Pai with 95.60%, Second Topper is Neel Thimayya Nanda Kandrathanda with 87.00%, Third Topper is Shinead Rebecca Fernandes with 86.80%, Fourth Topper Almira Shari Fernandes with 86.60% and Fifth Topper Giannah Claire Saldanha with 85.60%.
Ishaan Pai with 100% in Computer Science, 96% in Mathematics, 95% in Chemistry, 90% in Physics.
Shinead Rebecca Fernandes with 99% in English, 98% in Biology, 95 % in Chemistry.
Chinmay Sachidananda with 95% in Chemistry.
The Principal Fr. Rohan Dalmeida and Staff congratulate all the students of Class XII: 2025-26 for their excellent performance. Keep it up.

