

ಪಡುಕೋಣೆ : ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ದಿನಾಂಕ 10.5.2026 ರಂದು ಪುರಸ್ಕಾರ ಕಾರ್ಯಕ್ರಮ ನಡೆಯಿತು. ವಂ| ಫಾದರ್ ಪ್ರಾನ್ಸಿಸ್ ಕರ್ನೆಲಿಯೊರವರು S.S.L.C ಮತ್ತು P.U.C. ಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಪುಷ್ಪ, ನೆನಪಿನ ಕಾಣಿಕೆ ಹಾಗೂ ಧನ ಸಹಾಯವನ್ನು ನೀಡಿ ಸನ್ಮಾನಿಸಿದರು. ಈ ಸನ್ಮಾನವನ್ನು ದಿವಂಗತ ತೆರೆಜಾ ಕರ್ನೆಲಿಯೊ ಕೆಮ್ಮಣ್ಣು, ಅವರ ಸ್ಮರಣಾರ್ಥವಾಗಿ ಈ ನೀಡಲಾಯಿತು. S.S.L.Cಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು ಎಶೆಲ್ ಲುವಿಸ್, ರಶ್ವಿತಾ ಬುತ್ತೆಲ್ಲೊ, ರೊಜರ್ ಫೆರ್ನಾಂಡಿಸ್, ಪ್ರಿತಮ್ ಪ್ರಿನ್ಸ್ ಡಿ’ಸೋಜಾ, ವೆಲೊರಾ ಐರಿನ್ ರೆಬೆಲ್ಲೊ, ಪ್ರಿನ್ಸಿಯಾ ಮೊಂತೇರೊ. PUC 2ನೇ ವರ್ಷದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು ಎಸ್ಟನ್ ಲುವಿಸ್,ರೊಯ್ಲಿನ್ ಪಸಾನ್ನ, ಅಮ್ರತಾ ಡಿ’ಆಲ್ಮೇಡ, ಡಿಯಾನ್ ಡಿಆಲ್ಮೇಡ್, ಶೖನಿಶ್ ಡಿ’ಆಲ್ಮೇಡ್, ಜೆನಿಶಾ ಲೊಯ್ಲಿನ್ ಡಿಸೋಜ. ಈ ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು.












