

ಶ್ರೀನಿವಾಸಪುರ : ಆರೋಗ್ಯವು ಜೀವನದಲ್ಲಿ ಅತ್ಯಂತ ಮಹತ್ವಪೂರ್ಣ ಸಂಪತ್ತು ಹಾಗು ಭಾಗ್ಯ. . ಅಂದರೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯವೇ ಮನಷ್ಯನ ನಿಜವಾದ ಸಂಪತ್ತು. ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕರೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ 15 ನೇ ಹಣಕಾಸು ಯೋಜನೆಯಡಿಯಲ್ಲಿ 60 ಲಕ್ಷ ಮೌಲ್ಯದಲ್ಲಿ ನಿರ್ಮಿಸಲಾದ ಲ್ಯಾಬ್ನ ನೂತನ ಕಟ್ಟಡವನ್ನು ಉದ್ಗಾಟಿಸಿ ಮಾತನಾಡಿದರು.
ಹಣ ಅಂತಸ್ತು ಇದ್ದರೂ ಆರೋಗ್ಯವಿಲ್ಲದಿದ್ದರೆ ಜೀವನ ನರಕವಾಗುತ್ತದೆ. ಇಂದು ಆರೋಗ್ಯವಂತ ವ್ಯಕ್ತಿ ಮಾತ್ರ ಜೀವನದ ಸುಖ, ಸಂತೋಷಗಳನ್ನು ಅನುಭವಿಸಲು ಸಾಧ್ಯ. ಉತ್ತಮ ಆರೋಗ್ಯವಿದ್ದರೆ ಮಾತ್ರ ನಾವು ಅಂದುಕೊಂಡ ಗುರಿಯನ್ನು ಸಾಧಿಸಲು , ಪರಿಶ್ರಮ ಪಡಲು ಸಾಧ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರ, ವ್ಯಾಯಮ ಮತ್ತು ಶುದ್ದ ಪರಿಸರ ಅತ್ಯಗತ್ಯ ಎಂದರು.
ದುಡ್ಡು ಹೋದರೆ ಮತ್ತೆ ಸಂಪಾದಿಸಬಹುದು ಆದರೆ ಆರೋಗ್ಯ ಹೋದರೆ ಮರಳಿ ಪಡೆಯುವುದು ಕಷ್ಟ ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವದೇ ಜೀವನದ ಅತ್ಯಂತ ದೊಡ್ಡ ಜವಾಬ್ದಾರಿ ಮತ್ತು ಭಾಗ್ಯ ಎಂದು ಕರೆ ನೀಡಿದರು.
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ|| ಚಂದನ್, ಆಡಳಿತಾಧಿಕಾರಿ ಡಾ|| ಜಿ.ಎಸ್.ಶ್ರೀನಿವಾಸ್, ವೈದ್ಯ ಡಾ|| ಉಮಾಶಂಕರ್, ಮುಖಂಡರಾದ ಪೊಲ್ಶಿವಾರೆಡ್ಡಿ, ಶ್ರೀನಿವಾಸಪ್ಪ, ಸಿ.ರವಿ ಸಿಬ್ಬಂದಿಗಳಾದ ಕಲ್ಲೇಶ್ , ಮಹ್ಮದ್ಆಲಿ, ಎಂ.ಅಮರಾವತಿ, ಮೋಹನ್, ಅಂಬರೀಶ್, ಜಯಶ್ರೀ, ನಂದಿನಿ, ಸುಗುಣ, ಗಾಯತ್ರಿ, ಪ್ರತಿಭಾ, ಅನಿತ, ಮಂಜುನಾಥ್, ಶಿವಕುಮಾರ್, ಬೀಬಿಜಾನ್ ಇದ್ದರು.

