

ಬೈಂದೂರು: ಸಾಧಿಸಿದರೆ ಸಬಳವನ್ನೇ ನುಂಗಬಹುದು ಎನ್ನೋ ಮಾತಿಗೆ ಬೈಂದೂರಿನ ಎತ್ತರ ಗ್ರಾಮದ ಆಶಾ ವೀಣಾ ಡಾಯಸ್ ಅನ್ವಯಿಸುತ್ತಾರೆ ಶಾಲಾ ಜೀವನದಲ್ಲೇ ಪಠ್ಯ ಹಾಗೂ ಪಟ್ಯೇತರ ಚಟುವಟಿಕೆಯಲ್ಲಿ ತೋರಿದ ಪ್ರತಿಭೆಗೆ ಸೋಪಾನವೆಂಬಂತೆ ಪ್ರತಿಭಾನ್ವೇಷಣಾ ಸಂಸ್ಥೆಯ ಉತ್ತಮ ಸಂಯೋಜಕ ಪುರಸ್ಕಾರ,2025-26 ನೇ ಸಾಲಿನ ಐಬಿವಿಎಸ್ ಬೆಸ್ಟ್ ಟೀಚರ್ ಅಬೌಟ್ ಹಾಗೂ 2026 ನೇ ಸಾಲಿನ ಶಿಕ್ಷಕರ ಪರಿಷತ್ತು ನಡೆಸಿದ ಆಶುಭಾಷಣ ಸ್ಪರ್ಧೆಯಲ್ಲಿ ಟಾಪ್ ಟೆನ್ನರ ವಿಜೇತೆಯಾಗಿ ಆಯ್ಕೆ ಅಂಚೆ ಕಾರ್ಡಿನ ಮನಸ್ಸಿದ್ದರೆ ಮಾರ್ಗ ಮತ್ತು ನಿರ್ಮಲ ಪ್ರೀತಿ ಕಥಾ ಸ್ಪರ್ಧೆಗೆ ದ್ವಿತೀಯ ಸ್ಥಾನ ಗಳಿಸಿದ ಬಹುಮುಖ ಪ್ರತಿಭೆ
ಸಾಹಿತ್ಯ ಕಲೆ ಸಂಸ್ಕೃತಿಯ ಕುರಿತಾಗಿನ ಪ್ರತಿಭೆಯ ಕಣಜವಾಗಿರುವ ವೀಣಾ ಡಯಾಸ್ ಹೈಸ್ಕೂಲು ಹಂತದಲ್ಲಿಯೇ ಇದಕ್ಕಾಗಿ ರಾಜ್ಯ ಜಿಲ್ಲಾಮಟ್ಟದ ಪ್ರಶಸ್ತಿ ಗಳಿಸಿದವರು ವಲಯ ತಾಲೂಕು ಹಾಗೂ ಜಿಲ್ಲಾ ಹಂತದ ನಾನಾ ಸಂಘಗಳು ಏರ್ಪಡಿಸಿದ ಸುಮಾರು 120ಕ್ಕೂ ಹೆಚ್ಚು ಭಾಷಣ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಪ್ರಬಂಧ ಸ್ಪರ್ಧೆ ಮತ್ತು ಅನೇಕ ಏಕಪಾತ್ರ ಅಭಿನಯ ಸ್ಪರ್ಧೆಗಳಲ್ಲಿ ಬಹುಮಾನ ಮಕ್ಕಳ ದ್ವನಿ ಕಾರ್ಯಕ್ರಮಕ್ಕೆ ಆಯ್ಕೆ ಅಂತರಾಷ್ಟ್ರೀಯ ಪ್ರತಿಭಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹೆಗ್ಗಳಿಕೆ ಇವರದು ಇವರು ಕಷ್ಟ ಸ್ನೇಹ ಮತ್ತು ಪ್ರೀತಿ ಎಂಬ ಮೂರು ಕವನ ಬರೆದಿರುತ್ತಾರೆ ಇವರು ಬರೆದಿರುವ ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಬಿಎಡ್ ನಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ ಕರ್ನಾಟಕ ಶಿಕ್ಷಕರ ಪರೀಕ್ಷೆ (TET) ನಲ್ಲಿ ಉತ್ತಮ
ಅಂಕಗಳನ್ನು ಪಡೆದಿರುವ ಇವರು ಪತ್ರಿಕೋದ್ಯಮಗಳಲ್ಲಿ ಪದವಿಯನ್ನು ಪಡೆದಿದ್ದು 18 ವರ್ಷಗಳಿಂದ ಶಿಕ್ಷಕ ವೃತ್ತಿ ಹಾಗೂ ಕಾರ್ಯಕ್ರಮ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಷ್ಟೇ ಅಲ್ಲದೆ ಇತ್ತೀಚೆಗೆ ಇವರು ಮಮತೆಯ ಮಂದಾರ ಬರಿದಾಗದ ಚಿಲುಮೆ ಎಂಬ ಮಾತೆ ಮೇರಿಯ ಆಧ್ಯಾತ್ಮಿಕ ಪುಟ್ಟ ಪುಸ್ತಕವನ್ನು ಬರೆದಿರುವ ಪುಟ್ಟ ಪ್ರತಿಭೆಯಾಗಿದ್ದಾರೆ.
ಸರಳತೆ ಹಾಗೂ ಸದಾ ಸೇವಾ ಮನೋಭಾವ ಹೊಂದಿರುವ ಇವರಿಗೆ ಮಕ್ಕಳೊಡನೆ ಸಮಯ ಕಳೆದೆಂದರೆ ತುಂಬಾ ಇಷ್ಟ ನಿಜಕ್ಕೂ ಇವರು ಒಬ್ಬ ಅತ್ಯುತ್ತಮ ಬಹುಮುಖ ಪ್ರತಿಭೆಯಾಗಿ ಪ್ರಜ್ವಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಸ್ತುತ ಬೈಂದೂರು ಜೆ ಸಿ ಸದಸ್ಯರಾಗಿಯೂ ಕೂಡ ಸೇರ್ಪಡೆಗೊಂಡಿದ್ದಾರೆ.









