

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ದಿನಾಂಕ 27 ಏಪ್ರಿಲ್ 2026ರಂದು ಭಾರತ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ – ಅರ್ಥ್ ವೀಕ್ ಸೆಲೆಬ್ರೇಶನ್ ಇದರ ವತಿಯಿಂದ ಎಂಬಿಎ ಮುಖ್ಯಸ್ಥರಾದ ಡಾ. ಸುಚಿತ್ರ ಪೂಜಾರಿ ಇವರ ನೇತೃತ್ವದಲ್ಲಿ ಎರಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಳಿಗ್ಗೆ ಹತ್ತಿರದ ಕೊಡಿ ಬೀಚ್ ಗೆ ಎಂಬಿಎ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅಲ್ಲಿರುವ ಕಸಗಳನ್ನು ಹೆಚ್ಚು ವಿಲೇವಾರಿ ಮಾಡಲಾಯಿತು ಮತ್ತು ಮಧ್ಯಾಹ್ನ ಪ್ಲಾಸ್ಟಿಕ್ ಬ್ಯಾಗ್ ನ ಉಪಯೋಗವನ್ನು ಕಡಿಮೆ ಮಾಡಿ ಬಟ್ಟೆಯಿಂದ ತಯಾರಿಸಿದ ಬ್ಯಾಗ್ ಗಳನ್ನು ಉಪಯೋಗಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ಮನೆಗೂ ಒಂದೊಂದು ಬಟ್ಟೆಯಿಂದ ತಯಾರಿಸಿದ ಬ್ಯಾಗ್ ಗಳನ್ನು ವಿತರಿಸಲಾಯಿತು. ಈ ಕಾರ್ಯಗಾರದ ಉಸ್ತುವಾರಿಯನ್ನು ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ತಿಲಕ ಲಕ್ಷ್ಮಿ, ಮಿಸ್ ಚೈತಾಲಿ ಮತ್ತು ಶ್ರೀಮತಿ ನಾಗವೇಣಿ ಇವರು ವಹಿಸಿದ್ದರು.

