

ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಕಳೆದ 7 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ವಂದನೀಯ ಧರ್ಮಗುರು ವಿನ್ಸೆಂಟ್ ಕುವೆಲ್ಲೊ ರವರು ಶಿರ್ವ ವಲಯದ ಮುದರಂಗಡಿ ಸೈಂಟ್ ಪ್ರಾನ್ಸಿಸ್ ಕ್ಸೇವಿಯರ್ ಚರ್ಚಿಗೆ ವರ್ಗಾವಣೆ ಗೊಂಡಿದ್ದು ಮೇ 13ರಂದು ನಿರ್ಗಮಿಸಲ್ಲಿದ್ದಾರೆ. ಇವರು ತಮ್ಮ ಸೇವಾವಧಿಯಲ್ಲಿ ದಾನಿಗಳ ಸಹಾಯದಿಂದ ಆರೋಗ್ಯ ನಿಧಿ ಸ್ಥಾಪನೆ ಇಗರ್ಜಿ ಗುಡ್ಡೆ ಅಭಿವೃದ್ದಿ, ,ಇಗರ್ಜಿ ವಠಾರಕ್ಕೆ ಇಂಟರ್ ಲಾಕ್ ಅಳವಡಿಕೆ, ಚರ್ಚ್ ರಸ್ತೆಯ ಅಗಲಿಕರಣಕ್ಕೆ ಶ್ರಮಿಸಿದ್ದರು ಪರಿಸರದ ಎಲ್ಲಾ ಸಮಾಜ ಬಾಂಧವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಅವರ ಸ್ಥಾನಕ್ಕೆ ಕಾರ್ಕಳ ಸಮೀಪದ ಪರಪ್ಪಾಡಿ ಚರ್ಚಿನ ಧರ್ಮಗುರು ರೆ.ಫಾ ಡೆನ್ನಿಸ್ ಡಿ ಸೋಜಾರವರು ನಿಯುಕ್ತಿಗೊಂಡಿದ್ದು ಮೇ 12 ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ

